ಯಕ್ಷಲಹರಿ ತಾಳಮದ್ದಳೆ ಸಪ್ತಾಹ ಸಮಾರೋಪ

ಕಿನ್ನಿಗೋಳಿ : ಕಿನ್ನಿಗೋಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಯಕ್ಷಲಹರಿ ಯಂತಹ ಸಂಸ್ಥೆ ನಿರಂತರ ೨೬ ವರ್ಷಗಳಿಂದ ಯಕ್ಷಗಾನದ ಜ್ಞಾನ ಸಂಪತ್ತು ಹಾಗೂ ತರೆಯ ಮರೆಯ ಯಕ್ಷಗಾನ ಹಿರಿ ಕಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ಕರ್ಣಾಟಕ ಬ್ಯಾಂಕ್ ಹಿರಿಯ ಮಹಾ ಪ್ರಭಂಧಕ ರಾಘವೇಂದ್ರ ಭಟ್ ಹೇಳಿದರು.
ಕಿನ್ನಿಗೋಳಿಯ ಯಕ್ಷಲಹರಿ (ರಿ) ಮತ್ತು ಯುಗಪುರುಷದ ಆಶ್ರಯದಲ್ಲಿ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಯೋಗದೊಂದಿಗೆ ಯಕ್ಷಲಹರಿಯ ೨೭ ವರ್ಷದ ಸಂಭ್ರಮ -೨೦೧೭, ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳ ಮದ್ದಲೆ ಸಪ್ತಾಹ ಕೃಷ್ಣಸ್ತು ಭಗವಾನ್ ಸ್ವಯಮ್ ವಾರ್ಷಿಕೋತ್ಸವ-ಸಂಮಾನ-ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನಗೈದರು.
ಕಲಾ ಪೋಷಕರ ನೆಲೆಯಲ್ಲಿ ಯಕ್ಷಗಾನ ಕಲೆಗೆ ಪ್ರೋತ್ಸಾಹಕರಾಗಿದ್ದ ಮುಂಬಯಿಯ ಕಡಂದಲೆ ಸುರೇಶ ಭಂಡಾರಿ ಹಾಗೂ ಉದ್ಯಮಿ ಕೇಶವ ಅಂಚನ್ ಮುಂಬಾಯಿ, ಜಯರಾಮ ಎಮ್ ಶೆಟ್ಟಿ ಮೂಡಬಿದ್ರಿ ದಂಪತಿಯರನ್ನು ಹಾಗೂ ಕಲಾವಿದರ ನೆಲೆಯಲ್ಲಿ ಹಿರಿಯ ಚೆಂಡೆವಾದಕ ಮುಚ್ಚೂರು ಸುಬ್ರಾಯ ಭಟ್ ಅವರನ್ನು ಮೂಡಬಿದ್ರಿಯ ಉದ್ಯಮಿ ಶ್ರೀಪತಿ ಭಟ್ ಸನ್ಮಾನಿಸಿದರು. ವಿದ್ಯಾರಮೇಶ್ ಭಟ್ ಅಭಿನಂದನಾ ಭಾಷಣೆಗೈದರು.
ವೃತ್ತಿ ಕಲಾವಿದರ ಸುಮಾರು ೨೫ ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕರ್ಣಾಟಕ ಬ್ಯಾಂಕ್‌ನ ಹಿರಿಯ ಮಹಾ ಪ್ರಬಂಧಕ ರಾಘವೇಂದ್ರ ಭಟ್ ವಿತರಿಸಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷೆ ಸೆವ್ರಿನ್ ಲೋಬೊ, ವಿಜಯಕಲಾವಿದರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ, ಉಮೇಶ್ ನೀಲಾವರ, ವಿನಯ ಆಚಾರ್ ಹೊಸಬೆಟ್ಟು , ಅಶೋಕ ಆಚಾರ್ಯ ಉಪಸ್ಥಿತರಿದ್ದರು.
ಯಕ್ಷಲಹರಿಯ ಅಧ್ಯಕ್ಷ ಪಿ. ಸತೀಶ್ ರಾವ್ ಸ್ವಾಗತಿಸಿದರು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಶ್ರೀವತ್ಸ, ಪಶುಪತಿ ಶಾಸ್ತ್ರೀ, ಸುಧಾಕರ ಕುಲಾಲ್ ಮುಂಡ್ಕೂರು ಸನ್ಮಾನ ಪತ್ರ ವಾಚಿಸಿದರು. ವಸಂತ ದೇವಾಡಿಗ ವಂದಿಸಿದರು. ಪ್ರೊ. ಜಗದೀಶ ಹೊಳ್ಳ, ದೀಪ್ತಿ ಬಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10081704

Comments

comments

Comments are closed.

Read previous post:
Kinnigoli-10081703
ಸ್ವಚ್ಚತಾ ನೀತಿ ಪ್ರತಿಜ್ಞಾ ವಿಧಿ ಬೋದನೆ

ಕಿನ್ನಿಗೋಳಿ : ಹಳೆಯಂಗಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಸಹಯೋಗದಲ್ಲಿ ಬರ್ಹಿದೆಸೆ ಮುಕ್ತ ಸಪ್ತಾಹ ನಡೆಯಿತು....

Close