ಪೊಂಪೈ ಪ.ಪೂ. ಕಾಲೇಜು ಸ್ವರಕ್ಷಾ ಕಾರ್ಯಕ್ರಮ

ಕಿನ್ನಿಗೋಳಿ: ನಮ್ಮ ಜೀವಮಾನದಲ್ಲಿ ಸಮಾಜಕ್ಕೆ ಉಪಯೋಗವಾಗುವಂತ ಏನಾದರೊಂದು ಕೊಡುಗೆ ನೀಡಬೇಕು ಆಗ ಮಾತ್ರ ಜೀವನ ಸಾರ್ಥಕವೆನಿಸುತ್ತದೆ ಎಂದು ಐಕಳ ಪೊಂಪೈ ಶಾಲಾ ಕಾಲೇಜು ಸಮೂಹ ಸಂಸ್ಥೆಗಳ ಸಂಚಾಲಕ ರೆ.ಫಾ. ವಿಕ್ಟರ್ ಡಿಮೆಲ್ಲೋ ಹೇಳಿದರು
ಪೊಂಪೈ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾರ್ಶೆಲ್ ಆರ್ಟ್ ಕಲಾವಿದ, ಮಂಗಳೂರಿನ ಏಕಲವ್ಯ ಕಾರ್ತಿಕ್ ಎಸ್ ಕಟೀಲ್ ಹಾಗೂ ಶ್ರೀಮತಿ ಶೋಭಾಲತಾ ಅವರಿಂದ ವಿದ್ಯಾರ್ಥಿಗಳಿಗೆ ಶುಕ್ರವಾರ ನಡೆದ ಸ್ವರಕ್ಷಣಾ ತಂತ್ರಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರ್ಶಲ್ ಆರ್ಟ್ ಕಾರ್ತಿಕ್ ಎಸ್. ಕಟೀಲ್ ತರಬೇತು ನೀಡಿ ಮಾತನಾಡಿ ರಾಜ್ಯದ ವಿವಿಧ ಕಡೆಗಳಲ್ಲಿ ತರಬೇತಿ ಕೊಟ್ಟು ಇದೀಗ ಮೂರು ವರ್ಷಗಳನ್ನು ಪೂರೈಸಿದ್ದೇನೆ, ಎಲ್ಲರ ಸಹಕಾರದಿಂದ ನನಗೆ ಈ ಸಾಧನೆ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಸ್ವರಕ್ಷಣೆ ಕಲಿತು ಅದರೊಂದಿಗೆ ಶೈಕ್ಷಣಿಕ ಸವಾಲುಗಳನ್ನು ಎದುರಿಸಿ ಭವಿಷ್ಯದಲ್ಲಿ ಧೈರ್ಯ ವ್ಯಕ್ತಿತ್ವ ವಿಕಸನ ಬಲಗೊಳಿಸಬಹುದು ಎಂದರು
ಈ ಸಂದರ್ಭ ಕಾರ್ತಿಕ್ ಎಸ್ ಕಟೀಲ್ ಹಾಗೂ ಅವರ ಹೆತ್ತವರಾದ ಸುರೇಶ್ ಕಟೀಲ್ ಮತ್ತು ಶೋಭಲತಾ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಮ್ಯಾಥ್ಯೂ ಎನ್. ಎಂ ಸ್ವಾಗತಿಸಿದರು. ಉಪಾನ್ಯಾಸಕಿ ಶ್ರುತಿ ವಂದಿಸಿದರು. ಉಪಾನ್ಯಾಸಕ ಅನಂತ ಮುಡಿತ್ತಾಯ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

3 ವರ್ಷ ಪೂರೈಸಿದ ಸ್ವರಕ್ಷಾ ಕಾರ್ಯಕ್ರಮ
ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ವಿಷಯಗಳನ್ನು ತಿಳಿದು ಇದಕ್ಕೆ ಏನಾದರೂ ಪರಿಹಾರ ಕಂಡು ಕೊಳ್ಳಲು ತಾವೇ ಹೊಸ ರಕ್ಷಣಾ ತಂತ್ರಗಳನ್ನು ರೂಪಿಸಿ ಅದನ್ನು ತಾಯಿ ಶೋಭಲತಾ ಅವರಿಗೆ ಕಲಿಸಿ ಅದು ಪರಿಣಾಮಕಾರಿ ಅನಿಸಿದ ಮೇಲೆ ಶಾಲಾ ಕಾಲೇಜುಗಳಲ್ಲಿ ಕಲಿಸಲು ಮುಂದಾದರು.
ರಾಜ್ಯದ 380 ಸಂಸ್ಥೆಗಳ 1.06 ಲಕ್ಷಕ್ಕೂ ಮೀರಿ ವಿದ್ಯಾರ್ಥಿನಿಯರಿಗೆ ತರಬೇತಿ
95 ನಿಮಿಷಗಳ ಕಿಕ್ ಪಂಚ್ ಇಲ್ಲದ ತರಬೇತಿ ಜಾಗೃತಿ ಕಾರ್ಯಕ್ರಮ
11 ವರ್ಷದ ಹುಡುಗಿಯಿಂದ 60 ವರ್ಷದೊಳಗಿನ ಮಹಿಳೆಯರು ಸುಲಭವಾಗಿಲೀ ತಂತ್ರವನ್ನು ಕಲಿಯಬಹುದು
ಪೋಲೀಸ್ ಅಧಿಕಾರಿಗಳು, ವೈದ್ಯರು ಪ್ರೊಪೆಸರ್‌ಗಳು ಮತ್ತು ವಿದ್ಯಾರ್ಥಿನಿಯರಿಂದ ಮೆಚ್ಚುಗೆ ಪಡೆದಿದೆ.
ಈ ತರಬೇತಿಜಾಗೃತಿ ಕಾರ್ಯಕ್ರಮ ಮನ: ಶಾಸ್ತ್ರ ಮತ್ತು ನಡೆದ ನೈಜ ಘಟನೆಗಳ ಆಧಾರದಿಂದ ರೂಪಿಸಲಾಗಿದೆ.
ಕಾರ್ಯಕ್ರಮಕ್ಕೆ ಯಾವುದೇ ಸರಕಾರ ಅಥವಾ ಖಾಸಗಿ ಸಂಸ್ಥೆಗಳ ಆರ್ಥಿಕ ನೆರವು ಪಡೆಯದೆ ಸ್ವಯಂ ಆಸಕ್ತಿಯಿಂದ ಕಾರ್ಯಕ್ರಮ ನಡೆಯುತ್ತಿದೆ.

Kinnigoli-11081701

Comments

comments

Comments are closed.

Read previous post:
Kinnigoli-10081705
ಕಿನ್ನಿಗೋಳಿ ಆರಾಧನಾ ಮಹೋತ್ಸವ

ಕಿನ್ನಿಗೋಳಿ : ಸಮಾಜದಲ್ಲಿ ಧರ್ಮಜಾಗೃತಿ, ಧರ್ಮದ ಪುನರೋತ್ಥಾನಕ್ಕಾಗಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಮಹಾನ್ ಸಾಧಕ ರಾಘವೇಂದ್ರ ಸ್ವಾಮಿಜಿ ಅವರ ಆರಾಧನ ಮಹೋತ್ಸವ ನಿರಂತರ ನಡೆಯಬೇಕು ಎಂದು ಕಟೀಲು...

Close