ಕಟೀಲು ಮಿತ್ತಬೈಲು ಕೃಷಿ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ : ಸುಧಾರಿತ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕಾರ್ಯ ಮಾಡಿದಾಗ ಯಥೇಷ್ಟ ಲಾಭ ಪಡೆಯಬಹುದು ಎಂದು ಕೃಷಿ ಇಲಾಖಾ ಜಂಟಿ ನಿರ್ದೇಶಕ ಕೆಂಪೇಗೌಡ ಹೇಳಿದರು.
ಕಟೀಲು ನಡುಗೋಡು ಮಿತ್ತಬೈಲು ಪುರುಷೋತ್ತಮ ಕೋಟ್ಯಾನ್ ಅವರ ಗದ್ದೆಯಲ್ಲಿ ಭತ್ತದ ಹಾಗೂ ಇತರ ಬೆಳೆಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಉಪ ನಿರ್ದೇಶಕ ನಾಗರಾಜ ಎರಡು ಬಗೆಯ ಸುಧಾರಿತ ತಳಿಗಳಾದ ಇಂಟಿರ್ಗ ಮತ್ತು ಮಧುಮೇಹಿಗಳಿಗಾಗಿ ಮಧುರಿಕ ತಳಿಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಡಾ. ಹರೀಶ್ ಶೆಣೈ ಅವರು ಭತ್ತದ ತಳಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಕೊಂಡೆಮೂಲ, ನಡುಗೋಡು, ಮನ್ನೆಬೆಟ್ಟು, ಸೂರಿಂಜೆ, ಎಕ್ಕಾರು ಗ್ರಾಮಗಳ ರೈತರು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ರಾಜೇಂದ್ರ ಪ್ರಸಾದ್ ಸ್ವಾಗತಿಸಿ ವಂದಿಸಿದರು.

Kinnigoli-12081703

Comments

comments

Comments are closed.

Read previous post:
Kinnigoli-12081702
ಕಟೀಲು ಪರಿಸರ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ : ಮಂಗಳೂರು ಓಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಒಎಂಪಿಲ್) ಸಂಸ್ಥೆಯ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವಠಾರ ಹಾಗೂ ಆಸುಪಾಸಿನಲ್ಲಿ ಶನಿವಾರ ಪರಿಸರದ ಸ್ವಚ್ಛತಾ ಕಾರ್ಯಕ್ರಮ...

Close