ಪಕ್ಷಿಕೆರೆಯಲ್ಲಿ ವನ ಮಹೋತ್ಸವ

ಕಿನ್ನಿಗೋಳಿ : ಸಾಲು ಮರ ತಿಮ್ಮಕ್ಕ ಅವರ ಸ್ಪೂರ್ತಿಯಿಂದ ಪ್ರಭಾವಿತಗೊಂಡ ಪಕ್ಷಿಕೆರೆಯ ಉತ್ಸಾಹಿ ತರುಣ ವೃಂದ ಗಿಡಗಳನ್ನು ನೆಟ್ಟು ಮುಂದಿನ ಎರಡು ವರ್ಷಗಳ ಕಾಲ ಗಿಡಗಳನ್ನು ಪೋಷಣೆ ಮಾಡುವ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ ಹೇಳಿದರು.
ಸಮಾಜದ ಸಾಲು ಮರ ತಿಮ್ಮಕ್ಕ ಅಭಿಮಾನಿಗಳ ಸಂಘಟನೆಯ ಆಶ್ರಯದಲ್ಲಿ ಶನಿವಾರ ಪಕ್ಷಿಕೆರೆಯಲ್ಲಿ ರಸ್ತೆ ಬದಿಗಳಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಮಾತನಾಡಿದರು.
ಸಾಲು ಮರ ತಿಮ್ಮಕ್ಕ ಸಂಘಟನೆಯ ವಾಲ್ಟರ್ ಪಕ್ಷಿಕೆರೆ ಮಾತನಾಡಿ ಮೊದಲ ಹಂತದಲ್ಲಿ ಮಾವು, ಚಿಕ್ಕು, ಪೇರಳೆ ಸಹಿತ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಮತ್ತೆ ಒಂದು ವರ್ಷಗಳ ಕಾಲ ನೀರುಣಿಸಿ ಗಿಡಗಳನ್ನು ರಕ್ಷಣೆ ಮಾಡುವ ಹೊಣೆ ನಮ್ಮ ಸಂಘಟನೆ ವಹಿಸಿಕೊಂಡಿದೆ ಎಂದರು.
ಉದ್ಯಮಿ ದಾಮೋದರ ಭಂಡಾರಿ ಕೆಮ್ರಾಲ್, ಕೆಮ್ರಾಲ್ ಪಂಚಾಯಿತಿ ಪಿಡಿಒ ರಮೇಶ ರಾಥೋಡ್, ಉದ್ಯಮಿ ಧನಂಜಯ ಶೆಟ್ಟಿಗಾರ್, ಜಾಕ್ಸನ್ ಸಲ್ಡಾನ, ಲಿಗೋರಿ ಸಿಕ್ವೇರಾ, ಜೊಯಲ್ ಡಿಸೋಜ, ರಂಗನಾಥ ಭಟ್, ಶರನ್ ಡಿಸೋಜ ಮತ್ತಿತರರು ಉಪಸ್ಥಿರಿದ್ದರು. ಮೊದಲ ಹಂತದಲ್ಲಿ 30 ಕ್ಕೂ ದೊಡ್ಡ ಗಾತ್ರದ ಹಣ್ಣಿನ ಗಿಡಗಳನ್ನು ನೆಡಲಾಯಿತು.
Kinnigoli-12081704

 

Comments

comments

Comments are closed.

Read previous post:
Kinnigoli-12081701
ಕಿನ್ನಿಗೋಳಿ:ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಂದರ್ಭ ಸಮಿತಿಯ ಅಧ್ಯಕ್ಷ ರಾಮಣ್ಣ ಕುಲಾಲ್, ಕೆ.ಭುವನಾಭಿರಾಮ...

Close