ಕೆಮ್ರಾಲ್: ಆಟಿದ ಕೂಟ

ಕಿನ್ನಿಗೋಳಿ : ಹಿಂದಿನ ಕಾಲದಲ್ಲಿ ಆಟಿ ಸಮಯದಲ್ಲಿ ಭಾರೀ ಮಳೆ, ಕಿತ್ತು ತಿನ್ನುವ ಬಡತನ ಹಾಗೂ ಅನಾರೋಗ್ಯ ಬರುತ್ತಿದ್ದಾಗ ಹಾಲೆ ಮರದ ಕಷಾಯ ಇನ್ನಿತರ ಗಡ್ಡೆ ಗೆಣಸುಗಳು, ಸಸ್ಯಗಳು ಔಷಧವಾಗಿ ಉಪಯೋಗಿಸುತ್ತಿದ್ದರು. ವೈಜ್ಞಾನಿಕವಾಗಿಯೂ ಶ್ರುತಪಟ್ಟಿದೆ. ಇಂತಹ ಬದುಕು ಕಟ್ಟಿಕೊಂಡಿದ್ದ ಆಗಿನ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಅದು ಇಂದಿಗೂ ಪ್ರಸ್ತುತವಾಗಿದೆ. ಎಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್ ಹೇಳಿದರು.
ಕೆಮ್ರಾಲ್ ಹೊಸಕಾಡು ಪಂಚಾಯಿತಿ ಕಟ್ಟಡ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಒಕ್ಕೂಟದ ಕೆಮ್ರಾಲ್ -ಪದ್ಮನೂರು ಸಂಪಿಗೆ ಮತ್ತು ಸೇವಂತಿಗೆ ಜ್ಞಾನ ವಿಕಾಸ ಮಹಿಳಾ ಕೇಂದ್ರದ ಆಶ್ರಯದಲ್ಲಿ ಭಾನುವಾರ ನಡೆದ ಆಟಿದ ಪೊರ್ಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಅಧ್ಯಕ್ಷೆ ವಿದ್ಯಾಶ್ರೀ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ ಸ್ಥಳೀಯ ಪ್ರತಿಭೆ ಗ್ರೀಷ್ಮಾ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ಶ್ರೀ ಧ.ಗ್ರಾ. ಯೋಜನೆಯ ಸಮನ್ವಯಾಽಕಾರಿ ಚಂದ್ರಮೋಹಿನಿ, ಮೇಲ್ವಿಚಾರಕ ಯಶೋಧರಾ, ಜಿನರಾಜ ಬಂಗೇರ, ಸೇವಾ ಪ್ರತಿನಿಧಿ ಮಮತಾ, ಶಶಿಸುರೇಶ್, ಸರಿತಾ ಮತ್ತಿತರರು ಉಪಸ್ಥಿತರಿದ್ದರು.
ಬಬಿತಾ ಜಯಾನಂದ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಟಿಯ ವಿವಿಧ ತಿಂಡಿ ತಿನಸುಗಳ ಭೋಜನ ಕೂಟ ನಡೆಯಿತು.

Kinnigoli-14081704

Comments

comments

Comments are closed.

Read previous post:
Kinnigoli-14081703
ಪಂಜ : ತುಳುನಾಡ ಮಣ್ಣ್‌ಡ್ ಕೆಸರದ ಗೊಬ್ಬು

ಕಿನ್ನಿಗೋಳಿ : ಆಧುನಿಕತೆಯ ದಾವಂತದಲ್ಲಿ ತುಳುನಾಡಿನ ಅನೇಕ ಕ್ರೀಡೆಗಳು ಇಂದು ನಶಿಸಿ ಹೋಗುತ್ತಿವೆ ಅದನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಕಿರಿಯ ತಲೆಮಾರು ಮಣ್ಣಿನಿಂದ ದೂರಾವಾಗುವ ಇಂದಿನ...

Close