ಪಕ್ಷಿಕೆರೆ : ಗಾದ್ಯಾಂತ್ ಏಕ್ ದೀಸ್

ಕಿನ್ನಿಗೋಳಿ : ನಮ್ಮ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಜನತೆಯಲ್ಲಿದೆ ಕೇವಲ ಆಧುನಿಕತೆಗೆ ಮಾರು ಹೋಗದೆ ನಮ್ಮ ಉತ್ತಮ ಸಂಪ್ರದಾಯಗಳನ್ನು ಕೂಡಾ ಮುಂದುವರಿಸಿಕೊಂಡು ಹೋಗಬೇಕು ಎಂದು ಎಂದು ಪಕ್ಷಿಕೆರೆ ಚರ್ಚ್‌ನ ಧರ್ಮಗುರು ರೆ.ಫಾ. ಆಂಡ್ರ್ಯೂ ಲಿಯೋ ಡಿಸೋಜ ಹೇಳಿದರು.
ಪಕ್ಷಿಕೆರೆ ಚರ್ಚ್‌ನ ಸಾಪಕ ಧರ್ಮಗುರು ಫಾ| ಸ್ಟೇನ್ಲಿ ಆರ್ ಪಿರೇರಾ ಅವರ ಸ್ಮರಣಾರ್ಥ ಪಕ್ಷಿಕರೆ ಕೊಯಿಕುಡೆಯಲ್ಲಿ ಭಾನುವಾರ ನಡೆದ ಗಾದ್ಯಾಂತ್ ಏಕ್ ದೀಸ್ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದರು.
ಪಕ್ಷಿಕೆರೆ ಸಹಾಯಕ ಧರ್ಮ ಗುರು ರೆ.ಫಾ. ಕ್ಲಿಫರ್ಡ್ ಪಿಂಟೋ ಬೀಸುವ ಕಲ್ಲಿನಲ್ಲಿ ಅಕ್ಕಿಯನ್ನು ಬೀಸಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಉಧ್ಘಾಟಿಸಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್, ರೆ.ಫಾ. ಸುನೀಲ್ ಪಿಂಟೋ, ರೆ.ಫಾ. ಪ್ರವೀಣ್, ಕಿನ್ನಿಗೋಳಿ ವಲಯದ ಐಸಿವೈಎಮ್ ಅಧ್ಯಕ್ಷೆ ಪ್ರೀಮಾ, ಪ್ರಗತಿ ಪರ ಕೃಷಿಕ ಲಿಯೋ ಪಿರೇರಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜಾಕ್ಸನ್ ಸಲ್ದಾನಾ, ರಾಬರ್ಟ್ ಡಿಸೋಜ, ಪಕ್ಷಿಕೆರೆ ಐಸಿವೈಎಮ್ ಅಧ್ಯಕ್ಷೆ ಚೇತನಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-14081702

Comments

comments

Comments are closed.

Read previous post:
Kinnigoli-14081701
ಶಾಮಿಯಾನ ಒಕ್ಕೂಟದ 9 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಸಂಘಟನೆಯಲ್ಲಿ ಒಗ್ಗಟ್ಟು ಒಮ್ಮನಸ್ಸು ಇದ್ದಾಗ ತಾವು ನಡೆಸುವ ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಕರ್ತವ್ಯ ನಿಷ್ಠೆಯಿಂದ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾದ್ಯ ಎಂದು ಕೊಡೆತ್ತೂರು ದೇವಸ್ಯ...

Close