ಶಾಮಿಯಾನ ಒಕ್ಕೂಟದ 9 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಸಂಘಟನೆಯಲ್ಲಿ ಒಗ್ಗಟ್ಟು ಒಮ್ಮನಸ್ಸು ಇದ್ದಾಗ ತಾವು ನಡೆಸುವ ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಕರ್ತವ್ಯ ನಿಷ್ಠೆಯಿಂದ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾದ್ಯ ಎಂದು ಕೊಡೆತ್ತೂರು ದೇವಸ್ಯ ಮಠದ ಕೆ. ವೇದವ್ಯಾಸ ಉಡುಪ ಹೇಳಿದರು.
ಎಸ್.ಕೋಡಿ ಆದಿಶಕ್ತಿ ಮಾಹಮ್ಮಾಯೀ ಭವನದಲ್ಲಿ ಶನಿವಾರ ನಡೆದ ಶಾಮಿಯಾನ ಸಂಯೋಜಕರ ಒಕ್ಕೂಟ ಮೂಲ್ಕಿ- ಮೂಡಬಿದಿರೆ ವಲಯದ ೯ ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಲ್ಲಮುಂಡ್ಕೂರು ಗುರು ಅಕ್ಷಯ ಕ್ಯಾಟರಿಂಗ್ ನ ನಾಗೇಶ್ ಹಾಗೂ ದಾಮಸ್‌ಕಟ್ಟೆ ರೇಷ್ಮಾ ಏರೆಂಜರ‍್ಸ್ ನ ಪ್ರಶಾಂತ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಗುತ್ತಕಾಡು ಶಾಂತಿನಗರ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಉದ್ಯಮಿ ರೋಕಿ ಪಿಂಟೋ, ಶಾಮಿಯಾನ ಒಕ್ಕೂಟದ ಗೌರವಾಧ್ಯಕ್ಷ ಜಯಕೃಷ್ಣ ಕೋಟ್ಯಾನ್, ಪುನಿಯಾ ಟೆಂಟ್ ವರ್ಕ್‌ನ ಸೋಮಂಬಿರ್, ಎಮ್. ಎಸ್. ವಿ. ಟೆಂಟ್ ವರ್ಕ್ ಅಬ್ದುಲ್ ಲತೀಫ್, ಸದಾಶಿವ ಶೆಟ್ಟಿಗಾರ್ , ಸುರೇಶ ಸುವರ್ಣ, ಬಾಲಕೃಷ್ಣ ಅಮೀನ್, ಜಗನ್ನಾಥ ನಾಯಕ್, ದಿನೇಶ್ ಶೆಟ್ಟಿಗಾರ್, ನಂದೀಶ್ ಎಂ. ಕೋಟ್ಯಾನ್, ಜಯ ಪೂಜಾರಿ, ಸತೀಶ್ ಪೂಜಾರಿ, ತ್ರಿಶೂಲ್ ಕುಮಾರ್,
ಒಕ್ಕೂಟದ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಕಾರ್ಯದರ್ಶಿ ವಿಶ್ವನಾಥ ಶೆಣೈ ನಿ ರೇಗೋ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-14081701

Comments

comments

Comments are closed.

Read previous post:
Kinnigoli-12081705
ಕಟೀಲು: ಚಿತ್ರದುರ್ಗ ಮಡಿವಾಳ ಗುರು ಭೇಟಿ

 ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಚಿತ್ರದುರ್ಗ ಮಡಿವಾಳ ಗುರು ಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿ ಶನಿವಾರ ಭೇಟಿ ನೀಡಿದರು. ದೇವಳದ ವತಿಯಿಂದ ಅರ್ಚಕ ಲಕ್ಷ್ಮೀನಾರಾಯಣ...

Close