ಪಂಜ : ತುಳುನಾಡ ಮಣ್ಣ್‌ಡ್ ಕೆಸರದ ಗೊಬ್ಬು

ಕಿನ್ನಿಗೋಳಿ : ಆಧುನಿಕತೆಯ ದಾವಂತದಲ್ಲಿ ತುಳುನಾಡಿನ ಅನೇಕ ಕ್ರೀಡೆಗಳು ಇಂದು ನಶಿಸಿ ಹೋಗುತ್ತಿವೆ ಅದನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಕಿರಿಯ ತಲೆಮಾರು ಮಣ್ಣಿನಿಂದ ದೂರಾವಾಗುವ ಇಂದಿನ ದಿನಗಳಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ಕೆಲಸ ಕಾರ್ಯಗಳು ನಡೆಯಬೇಕು ಎಂದು ಪಂಜ ಮಹಾಗಣಪತಿ ಮಂದಿರ ಸುರೇಶ್ ಭಟ್ ಹೇಳಿದರು.
ಪಂಜ ಕೊಯಿಕುಡೆ ಶ್ರೀ ವಿಠೋಭ ಭಜನಾ ಮಂಡಳಿ ಹಾಗೂ ಸ್ಥಳೀಯ ಸಂಘ ಸಂಸ್ತೆಗಳ ಸಂಯುಕ್ತ ಆಶ್ರಯದಲ್ಲಿ ಪಂಜ-ಮಧ್ಯ ಕೂಡು ರಸ್ತೆಯ ಬಳಿಯ ಗದ್ದೆಯಲ್ಲಿ ಭಾನುವಾರ ನಡೆದ ತುಳುನಾಡ ಮಣ್ಣ್‌ಡ್ ಕೆಸರ‍್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಮಜಲಗುತ್ತು ರಾಜೇಶ್ ಶೆಟ್ಟಿ, ಪಂಜ ಬಾಕಿಮಾರು ಗುತ್ತು ದಯಾನಂದ ಶೆಟ್ಟಿ, ಮೊಗಪಾಡಿಗುತ್ತು ಶ್ರೀನಾಥ್ ಹೆಗ್ಡೆ, ಪಂಜ ನಲ್ಯಗುತ್ತು ಗುತ್ತಿನಾರ್ ಭೋಜ ಶೆಟ್ಟಿ, ಪಂಜ ಕೊಯಿಕುಡೆ ಶ್ರೀ ವಿಠೋಭ ಭಜನಾ ಮಂಡಳಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪಂಜಗುತ್ತು, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಪಂಜ, ಆಶಾ, ಸುಮತಿ, ಪಂಜ ಕೊಯಿಕುಡೆ ಶನೀಶ್ವರ ಮಂಡಳಿ ಅದ್ಯಕ್ಷ ಬಾಸ್ಕರ ಶೆಟ್ಟಿ, ಸುಂದರ ಪೂಜಾರಿ, ಬಾಕಿಮಾರು ಗುತ್ತು ಗಣೇಶ್ ಶೆಟ್ಟಿ , ಪಂಜ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸತೀಶ್ ಜೆ. ಶೆಟ್ಟಿ, ಸಾನದ ಮನೆ ಕರಿಯ ಕುಕ್ಯಾನ್, ಚಾಮುಂಡೇಶ್ವರಿ ಸನ್ನಿಧಿಯ ಸೀತಾರಾಮ ಅಮೀನ್, ಸಾನದ ಮನೆ ನಾರಾಯಣ ಪೂಜಾರಿ, ಕೋರ‍್ದಬ್ಬು ದೈವಸ್ಥಾನದ ಸಂಜೀವ ಗುರಿಕಾರ, ಭಗವತಿ ನಿಲಯದ ಕಿರಣ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿಸೋಜ, ಅಂಗನವಾಡಿ ಶಿಕ್ಷಕಿ ತಾರಾ ಶೈಲಾ ಶೆಟ್ಟಿ ಮತ್ತಿತರರು ಇದ್ದರು.
ಸತೀಶ್ ಎಮ್ ಶೆಟ್ಟಿ ಬೈಲಗುತ್ತು ಪ್ರಸ್ತಾವನೆಗೈದು ಸ್ವಾಗತಿಸಿದರು. ಪದ್ಮನಾಭ ಪೂಜಾರಿ ವಂದಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನಿದಿ ಶೋಧನೆ, ತೆಂಗಿನ ಗರಿ ಹೆಣೆಯುವ ಸ್ಪರ್ಧೆ, ಜಾನಪದ ನೃತ್ಯ, ಉಪ್ಪು ಮೂಟೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಮಡಕೆ ಒಡೆಯುವುದು, ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಹಿಮ್ಮುಖ ಓಟ, ಮೂರು ಕಾಲಿನ ಓಟ, ಪಿರಮಿಡ್ ರಚನೆ , ಮಕ್ಕಳಿಗೆ ಹಾಳೆ ಎಳೆಯುವುದು ಮತ್ತಿತರರ ಸ್ಪರ್ಧೆಗಳು ನಡೆದವು.

Kinnigoli-14081703

Comments

comments

Comments are closed.

Read previous post:
Kinnigoli-14081702
ಪಕ್ಷಿಕೆರೆ : ಗಾದ್ಯಾಂತ್ ಏಕ್ ದೀಸ್

ಕಿನ್ನಿಗೋಳಿ : ನಮ್ಮ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಜನತೆಯಲ್ಲಿದೆ ಕೇವಲ ಆಧುನಿಕತೆಗೆ ಮಾರು ಹೋಗದೆ ನಮ್ಮ ಉತ್ತಮ ಸಂಪ್ರದಾಯಗಳನ್ನು ಕೂಡಾ ಮುಂದುವರಿಸಿಕೊಂಡು...

Close