ಮೂಲ್ಕಿ: ಮನೆಗೆ ಆಕಸ್ಮಿಕ ಬೆಂಕಿ ಸಂಪೂರ್ಣ ಭಸ್ಮ

ಮೂಲ್ಕಿ: ಹಂಚಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಬಸ್ಮವಾದ ಘಟನೆ ಮುಲ್ಕಿ ವಿಜಯಾ ಕಾಲೇಜು ಬಳಿ ನಡೆದಿದೆ, ಮುಲ್ಕಿ ವಿಜಯಾ ಕಾಲೇಜಿಗೆ ಸಂಚರಿಸುವ ರಸ್ತೆ ಸಮೀಪದ ಪ್ರದೀಪ್ ಎಂಬುವವರಿಗೆ ಸೇರಿದ ಮನೆಯಲ್ಲಿ ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾದ್ಯಾಪಕ ಚಂದ್ರ ಶೇಖರ್ ಎಂಬುವವರು ವಾಸವಾಗಿದ್ದರು, ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಯನ್ನು ನೋಡಿದ ಸ್ಥಳೀಯರು, ಕೂಡಲೆ ಮುಲ್ಕಿ ಠಾಣೆಗೆ ಮತ್ತು ಅಗ್ನಿ ಶಾಮಕ ದಳಕ್ಕೆ ತಿಳಿಸಿದ್ದು, ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದು ಅದನ್ನು ಕೂಡಲೇ ಹೊರತೆಗೆದ ಕಾರಣ ದೊಡ್ಡ ಅವಘಡ ತಪ್ಪಿದಂತಾಗಿದೆ, ಮನೆಯ ಮುಂಬಾಗದಲ್ಲಿದ್ದ ದ್ವಿಕಕ್ರ ವಾಹನ, ಮನೆಯಲ್ಲಿದ್ದ ಅಮೂಲ್ಯ ಸೂತ್ತುಗಳು ಸುಟ್ಟು ಬಸ್ಮವಾಗಿದೆ ಸ್ಥಳಕ್ಕೆ ಮುಲ್ಕಿ ಠಾಣಾಧಿಕಾರಿ ಅನಂತ ಪದ್ಮನಾಭ ಮತ್ತು ಜನ ಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

Mulki-15081701 Mulki-15081704 Mulki-15081703 Mulki-15081702

Comments

comments

Comments are closed.

Read previous post:
Kinnigoli-14081704
ಕೆಮ್ರಾಲ್: ಆಟಿದ ಕೂಟ

ಕಿನ್ನಿಗೋಳಿ : ಹಿಂದಿನ ಕಾಲದಲ್ಲಿ ಆಟಿ ಸಮಯದಲ್ಲಿ ಭಾರೀ ಮಳೆ, ಕಿತ್ತು ತಿನ್ನುವ ಬಡತನ ಹಾಗೂ ಅನಾರೋಗ್ಯ ಬರುತ್ತಿದ್ದಾಗ ಹಾಲೆ ಮರದ ಕಷಾಯ ಇನ್ನಿತರ ಗಡ್ಡೆ ಗೆಣಸುಗಳು, ಸಸ್ಯಗಳು...

Close