ಅಲ್ಲಲ್ಲಿ ಸ್ವಾತಂತ್ಸೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಜಲಜಾ ಧ್ವಜಾರೋಹಣಗೈದರು. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.

ಮುಕ್ಕ ಮಿತ್ರಪಟ್ಣ ಶ್ರೀ ರಾಮ ಮಂದಿರ
ಮುಕ್ಕದ ಮಿತ್ರಪಟ್ಣ ಶ್ರೀ ರಾಮ ಮಂದಿರದಲ್ಲಿ ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷ ರವೀಂದ್ರ ಕರ್ಕೇರ ಧ್ವಜಾರೋಹಣಗೈದರು. ಮಿತ್ರಪಟ್ಣ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್, ಲೋಕೇಶ್ ಬ೦ಗೇರ, ದಾಮೋದರ ಬಂಗೇರ, ಪ್ರಿತೇಶ್ ಸುವರ್ಣ, ರಾಜ್ ಕುಮಾರ್ ಕರ್ಕೇರ, ಚಂದ್ರಶೇಖರ್ ಕುಂದರ್, ಧೀರಾಜ್ ಬಂಗೇರ, ಪುನೀತ್ ಸುವರ್ಣ, ನಿತೇಶ್ ಸುವರ್ಣ, ಕಿಶೋರ್ ಕುಮಾರ್ ಹಾಗೂ ಭಜನಾ ಮಂದಿರದ ಸದಸ್ಯರು ಉಪಸ್ಥಿತರಿದ್ದರು.

ಬೊಳ್ಳೂರು ಮುಹಿಯದ್ದೀನ್ ಜುಮ್ಮಾ ಮಸೀದಿ
ಬೊಳ್ಳೂರಿನ ಮುಹಿಯದ್ದೀನ್ ಜುಮ್ಮಾ ಮಸೀದಿಯ “ದಾರುಲ್ ಉಲೂಮ್ ಅರಬಿಕ್ ಸ್ಕೂಲ್”ನ ಮದರಸದಲ್ಲಿ ಮಸೀದಿಯ ಅಧ್ಯಕ್ಷ ಹಾಜಿ ಇದ್ದಿನಬ್ಬ ಧ್ವಜಾರೋಹಣಗೈದರು. ಮದರಸದ ಮುಖ್ಯ ಗುರು ಅಬ್ದುಲ್ ನಾಸೀರ್ ಮದನಿ, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಝ್, ಜಮಾತಿನ ಸದಸ್ಯರು ಉಪಸ್ಥಿತರಿದ್ದರು.

ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ
ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವ ಅಭಿವೃದ್ಧಿ ಕೇಂದ್ರ, ಕಿಶೋರ-ಕಿಶೋರಿ ಸಂಘ, ಮತ್ತು ಯುವತಿ ಮತ್ತು ಮಹಿಳಾ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮತ್ತು ಯುವತಿ ಮಂಡಲದ ವಠಾರದಲ್ಲಿ ಹಳೆಯಂಗಡಿ ಕೆನರಾ ಬ್ಯಾಂಕ್ ಶಾಖೆಯ ಹಿರಿಯ ಪ್ರಬಂಧಕ ಎಚ್.ಆರ್.ಪವಾರ್ ಧ್ವಜಾರೋಹಣಗೈದರು. ಸುರತ್ಕಲ್‌ನ ಕನ್ಸಲ್ಟೆಂಟ್ ಸಿವಿಲ್ ಇಂಜಿನಿಯರ್ ಗಣೇಶ್ ಆಚಾರ‍್ಯ, ರಜತ ಸೇವಾ ಟ್ರಸ್ಟ್‌ನ ಬಿ.ಸೂರ್ಯಕುಮಾರ್, ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಚಿಲಿಂಬಿ, ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ರಾಮಚಂದ್ರ, ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್.ಅಮೀನ್, ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರೀ ಕೋಟ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ತೋಕೂರು ಶ್ರೀ ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆ
ತೋಕೂರು ಶ್ರೀ ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆಯಲ್ಲಿ ದ.ಕ.ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು ಧ್ವಜಾರೋಹಣಗೈದರು. ಮಾಜಿ ತಾ.ಪಂ. ಸದಸ್ಯ ರಾಜು ಕುಂದರ್, ಪಂ. ಸದಸ್ಯೆ ಸಂಪಾವತಿ, ಮುಖ್ಯ ಶಿಕ್ಷಕಿ ಗೌರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಯೋಗೀಶ್, ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಳೆಯಂಗಡಿ ರಿಕ್ಷಾ ಚಾಲಕರ ಮಾಲಕರ ಸಂಘ
ಹಳೆಯಂಗಡಿಯ ರಿಕ್ಷಾ ಚಾಲಕರ ಮಾಲಕರ ಸಂಘದ ಆಶ್ರಯದಲ್ಲಿ ರಿಕ್ಷಾ ನಿಲ್ದಾಣದಲ್ಲಿ ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಧ್ವಜಾರೋಹಣಗೈದರು. ಸಂಘದ ಅಧ್ಯಕ್ಷ ಚಂದ್ರಶೇಖರ ಕದಿಕೆ, ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಉಲ್ಲಂಜೆ
ಉಲ್ಲಂಜೆ ದ.ಕ.ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ಧ್ವಜಾರೋಹಣಗೈದರು. ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಂಚಾಯಿತಿ ಸದಸ್ಯರಾದ ಲಕ್ಷ್ಮೀ,ಶಾಲಿನಿ, ಮಲ್ಲಿಕಾ, ಮೀನಾಕ್ಷಿ, ಸುಶೀಲ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶೇಖರ ಶೆಟ್ಟಿ, ಹರೀಶ್ಚಂದ್ರ, ದಯಾನಂದ ಶೆಟ್ಟಿ, ಯುವಶಕ್ತಿ ಫ್ರೆಂಡ್ಸ್‌ನ ಅಧ್ಯಕ್ಷರಾಜೇಶ ಕುಲಾಲ್, ಮುಖ್ಯ ಶಿಕ್ಷಕಿ ಮಂಗಳಾ ಎಸ್. ಭಟ್ ಮತ್ತಿತರರು ಉಪಸ್ಥಿತರಿದ್ದರು.

ಯುವಶಕ್ತಿ ಫ್ರೆಂಡ್ಸ್ ಉಲ್ಲಂಜೆ
ಉಲ್ಲಂಜೆ ಯುವ ಶಕ್ತಿ ಫ್ರೆಂಡ್ಸ್ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಯುಗಪುರುಷದ ಕೆ. ಭುವನಾಭಿರಾಮ ಉಡುಪ ನೆರವೇರಿಸಿದರು. ಯುವ ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ರಾಜೇಶ ಕುಲಾಲ್, ಮೋಹನ ಬಂಗೇರ, ಉಮಾನಾಥ , ಶೈಲೇಶ್, ಕಲ್ಪೇಶ್ ಶೆಟ್ಟಿ, ಮಲ್ಲಿಕಾ ಲಕ್ಷ್ಮೀ, ವಿನುತಾ ಸುರೇಶ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಆದರ್ಶ ಬಳಗ ಕೊಡೆತ್ತೂರು
ಯುಗಪುರುಷದ ಕೆ. ಭುವನಾಭಿರಾಮ ಉಡುಪ ಧ್ವಜಾರೋಹಣಗೈದರು. ಈ ಸಂದರ್ಭ ಗ್ರಾಮದ ಅಹ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆದರ್ಶ ಬಳಗ ಕೊಡೆತ್ತೂರು ಅಧ್ಯಕ್ಷ ಸೂರಜ್ ಶೆಟ್‌ಟಿ, ದಾಮೋದರ ಶೆಟ್ಟಿ, ರಾಜೇಶ ಕುಂದರ್, ಪ್ರಕಾಶ್ ಶೆಟ್ಟಿ, ಕಾರ್ತಿಕ್ ಪೂಜಾರಿ, ಅಂಬರೀಷ್ ಶೆಟ್ಟಿ ಜಯರಾಮ ಶೆಟ್ಟಿ, ಕೇಶವ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ, ತೋಕೂರು
ದಕ್ಷಿಣಕನ್ನಡ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಸಹಾಯಕ ಆಯುಕ್ತ ಎಮ್. ಸರ್ವೋತ್ತಮ ಅಂಚನ್ ಧ್ವಜಾರೋಹಣಗೈದರು. ಸಂಸ್ಥೆಯ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್, ರಘುರಾಮ್ ರಾವ್, ಹರಿ ಎಚ್, ಸುರೇಶ್ ಎಸ್, ಸಂಜೀವ ದೇವಾಡಿಗ, ಉದಯಕುಮಾರ್, ಲಕ್ಷೀಕಾಂತ ಮತ್ತಿತರರು ಉಪಸ್ಥಿತರಿದ್ದರು.

ಪುನರೂರು ಭಾರತ ಮಾತಾ ಶಾಲೆ
ಶಾಲಾ ಸಂಚಾಲಕ ವಿನೋಭನಾಥ ಐಕಳ ಧ್ವಜಾರೋಹಣಗೈದರು. ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕ ಕೃಷ್ಣ ಮೂರ್ತಿರಾವ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪೂರೆಪ್ಪ ಚೌವಾಣ್ ಸ್ವಚ್ಚತೆಯ ಬಗ್ಗೆ ಪ್ರತಿಜ್ಞಾ ವಿಧಿ ನಡೆಸಿದರು. ಸಹ ಶಿಕ್ಷಕ ಕೃಷ್ಣ , ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ಹರೀಶ್, ಜ್ಯೋತಿ ಲತಾ, ಮಾಲತಿ ಉಷಾ , ಅಂಗನವಾಡಿ ಶಿಕ್ಷಕಿ ಕಸ್ತೂರಿ ಮತ್ತಿತರರು ಉಪಸ್ಥಿತರಿದ್ದರು.

ನಾಗರಿಕ ಹಿತಾರಕ್ಷಣಾ ವೇದಿಕೆ ಗುತ್ತಕಾಡು ಶಾಂತಿನಗರ
ಸಂಸ್ಥೆಯ ಅಧ್ಯಕ್ಷ ಅಬೂಬಕ್ಕರ್ ಧ್ವಜಾರೋಹಣಗೈದರು. ಕೇಶವ ದೇವಾಡಿಗ, ಟಿ. ಎ. ಹನೀಫ್, ಅಬ್ದುಲ್ ರಜಾಕ್, ಚಂದ್ರಶೇಖರ್, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಧರ್ಮದರ್ಶಿ ವಿವೇಕಾನಂದ, ಶ್ರೀಧರ ಅಮೀನ್, ಯಶೋಧರ, ಬಾಲಕೃಷ್ಣ ಡಿ. ಸಾಲ್ಯಾನ್, ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಏಳಿಂಜೆ ಶ್ರೀ ದೇವಿ ಮಹಿಳಾಯುವತಿ ಹಾಗೂ ಮಹಿಳಾ ಮಂಡಲ
ಏಳಿಂಜೆ ದೇವಳದ ಅರ್ಚಕ ಗಣೇಶ್ ಭಟ್ ಧ್ವಜಾರೋಹಣಗೈದರು. ಲಯನ್ಸ್ ವೈ. ಯೋಗೀಶ್ ರಾವ್ , ವೈ. ಕೆ. ಸಾಲ್ಯಾನ್, ದೇವಿ ಪ್ರಸಾದ್ ಶೆಟ್ಟಿ , ನಾಗೇಶ್ , ಸುಧಾಕರ ಸಾಲ್ಯಾನ್, ನಾಗಲಕ್ಷ್ಮೀ ಭಟ್, ವತ್ಸಲಾ ಯೋಗೀಶ್ ರಾವ್, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

ಭ್ರಾಮರೀ ಫ್ರೆಂಡ್ಸ್ ಉಮ್ಮೆಟ್ಟು ಮಲ್ಲಿಗೆಯಂಗಡಿ :
ಹರ್ಷರಾಜ್ ಶೆಟ್ಟಿ ಧ್ವಜಾರೋಹಣಗೈದರು. ನವೀನ್ ಕುಮಾರ್ ಕಟೀಲು, ಜಯರಾಮ ಪೂಜಾರಿ, ಗಣೇಶ್ ಆಚಾರ್ಯ, ಗಿರೀಶ್, ಸುಭಾಸ್, ದುರ್ಗಾಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
ಅಲ್ಲಲ್ಲಿ ಸ್ವಾತಂತ್ಸೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಧ್ವಜಾರೋಹಣಗೈದರು. ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಪಂಚಾಯಿತಿ ಸದಸ್ಯರು ಹಾಗೂ ಪಂಚಾಯಿತಿ...

Close