ಸುರಗಿರಿ ಪರಿಸರ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಅತ್ತೂರು ಒಕ್ಕೂಟದ ಆಶ್ರಯದಲ್ಲಿ ಭಾನುವಾರ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮ ಭಾನುವಾರ ನಡೆಯಿತು. ದೇವಳದ ಪ್ರಾಂಗಣ ಹಾಗೂ ಪರಿಸರವನ್ನು ಸ್ವಚ್ಚಗೊಳಿಸಲಾಯಿತು. ಜನಜಾಗೃತಿ ವೇದಿಕೆಯ ಸದಸ್ಯರಾದ ಧನಂಜಯ ಶೆಟ್ಟಿಗಾರ್, ಯುವಕ ಮಂಡಲದ ಅಧ್ಯಕ್ಷ ಸಚಿನ್ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ನಿರ್ಮಲಾ ನಾಯಕ್, ಧ.ಗ್ರಾ.ಯೋ. ಮೇಲ್ವಿಚಾರಕ ಯಶೋಧರ್, ಅತ್ತೂರು ಒಕ್ಕೂಟದ ಅಧ್ಯಕ್ಷ ಆನಂದ ಶೆಟ್ಟಿ, ಸೇವಾಪ್ರತಿನಿಧಿ ವಿನಯಲತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-17081702

Comments

comments

Comments are closed.

Read previous post:
Kinnigoli-17081701
ಶಾಮಿಯಾನ – ರಾಜೇಶ್ ಕೆಂಚನಕೆರೆ ಆಯ್ಕೆ

ಕಿನ್ನಿಗೋಳಿ: ಶಾಮಿಯಾನ ಸಂಯೋಜಕರ ಒಕ್ಕೂಟ ಮೂಲ್ಕಿ-ಮೂಡಬಿದಿರೆ ವಲಯದ ಅಧ್ಯಕ್ಷರಾಗಿ ರಾಜೇಶ್ ಕೆಂಚನಕೆರೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಜಯಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಗಂಗಾಧರ ಶೆಟ್ಟಿ, ಕಾರ್ಯದರ್ಶಿ ವಿಶ್ವನಾಥ ಶೆಣೈ, ಜೊತೆ ಕಾರ್ಯದರ್ಶಿ...

Close