ಅತ್ತೂರು ಕಾಪಿಕಾಡು ಧಾರ್ಮಿಕ ಸಭೆ

ಕಿನ್ನಿಗೋಳಿ: ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡಿ ಭವಿಷ್ಯದಲ್ಲಿ ಉತ್ತಮ ಜೀವನ ಕಂಡು ಕೊಳ್ಳಲು ಸಹಕರಿಸಬೇಕು. ಎಂದು ದ. ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಹೇಳಿದರು.
ಪಕ್ಷಿಕೆರೆ ಅತ್ತೂರು ಕಾಪಿಕಾಡು ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ 13 ನೇ ವಾರ್ಷಿಕೋತ್ಸವ ಹಾಗೂ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಜಾಗೃತಿ ಹಾಗೂ ಅದನ್ನು ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಪಂಜ ವಾಸುದೇವ ಭಟ್ ಶುಭ ಹಾರೈಸಿದರು.
ದ. ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲು, ಜಯರಾಮ ಆಚಾರ್ಯ ಕೊಯಿಕುಡೆ, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಲೀಲಾ ಕೃಷ್ಣಪ್ಪ, ಸೇಸಪ್ಪ ಸಾಲ್ಯಾನ್, ಪ್ರಮೀಳಾ ಡಿ. ಶೆಟ್ಟಿ, ಪಕ್ಷಿಕೆರೆ ಅತ್ತೂರು ಕಾಪಿಕಾಡು ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ರಿಚಾರ್ಡ್ ಡಿಸೋಜ, ಕ್ಲಬ್ ಅಧ್ಯಕ್ಷ ಸುರೇಶ್ ಜಿ. ಕುಂದರ್ ಉಪಸ್ಥಿತರಿದ್ದರು.
ದಿವಾಕರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಜಯಶ್ರೀ ಸ್ವಾಗತಿಸಿದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-18081703

Comments

comments

Comments are closed.

Read previous post:
Kinnigoli-18081702
ಬಿ.ಕೆ.ಹರಿಪ್ರಸಾದ್ ಭೇಟಿ

ಕಿನ್ನಿಗೋಳಿ: ಇತ್ತೀಚಿಗೆ ಅಸಹಜ ಸಾವನ್ನಪ್ಪಿದ ವಿದ್ಯಾರ್ಥಿನಿ ಕಾವ್ಯಾಳ ಕಟೀಲು ದೇವರಗುಡ್ಡೆಯ ಮನೆಗೆ ರಾಜ್ಯಸಭಾ ಸದಸ್ಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು.

Close