ಭಜನಾ ಸಂಕೀರ್ಥನೆ

ಮೂಲ್ಕಿ: ಏಕಾಗ್ರತೆಯಿಂದ ನಡೆಸುವ ಭಜನಾ ಸಂಕೀರ್ಥನೆ ಭಗವಂತನನ್ನು ಮೆಚ್ಚಿಸಲು ಬಹು ಸಹಕಾರಿ ಎಂದು ದೈವಜ್ಞ ರಾಮಚಂದ್ರ ಭಟ್ ಹೇಳಿದರು.
ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಸಿಂಹ ಮಾಸದ ಒಂದು ತಿಂಗಳ ಪ್ರಯುಕ್ತ ಮಹಿಳೆಯರಿಂದ ನಡೆಯುವ ಭಜನಾ ಸಂಕೀರ್ಥನೆಯ ಪ್ರಾರಂಭ ಕಾಲದಲ್ಲಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ನಿರಂತರ ನಡೆಸಲಾಗುವ ಭಜನಾ ಕಾರ್ಯಗಳಿಂದ ಸಾನಿಧ್ಯ ವೃದ್ಧಿಯಾಗಿ ಕೌಟುಂಬಿಕ ಅಥವಾ ಗ್ರಾಮಾರಿಷ್ಠಗಳ ನಿವಾರಣೆಯಾಗಿ ಸುಭೀಕ್ಷೆ ನೆಲೆಸಲು ಸಾಧ್ಯ ಎಂದರು.
ಈ ಸಂದರ್ಭ ಕ್ಷೇತ್ರದ ಶ್ರೀ ಆದಿಜನಾರ್ದನ ದೇವರಿಗೆ ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ರವರಿಂದ ವಿಶೇಷ ಪ್ರಾರ್ಥನೆ ನಡೆದ ಬಳಿಕ ಇಂದಿರಾ ಮತ್ತು ಸುಬ್ಬರಾವ್ ದಂಪತಿ,ಹರಿಣಿ ಮತ್ತು ರಾಮಚಂದ್ರ ಭಟ್ ದಂಪತಿ,ಸವಿತಾ ಮತ್ತು ಪುರುಷೋತ್ತಮ ಭಟ್ ದಂಪತಿ ದೀಪಬೆಳಗಿಸಿ ಸಂಕೀರ್ಥನೆಗೆ ಚಾಲನೆ ನೀಡಿದರು.ಈ ಸಂದರ್ಭ ಸುಜನಾ ಶೇಖರ ಶೆಟ್ಟಿ,ಜ್ಯೋತಿ ವೇದವ್ಯಾಸ ರಾವ್ ಮತ್ತು ಗ್ರಾಮದ ಭಕ್ತಾಧಿಮಾನಿಗಳು ಉಪಸ್ಥಿತರಿದ್ದರು.

Mulki-18081702

Comments

comments

Comments are closed.

Read previous post:
Mulki-18081701
ರಿಕ್ಷಾ ಚಾಲಕರು ಜನಸಾಮಾನ್ಯರಿಗೆ ಸಹಕಾರಿ

ಹಳೆಯಂಗಡಿ: ಗ್ರಾಮೀಣ ಶ್ರಮಿಕ ವರ್ಗದಜನರಾದ ರಿಕ್ಷಾ ಚಾಲಕರು ಜನಸಾಮಾನ್ಯರಿಗೆ ಸಹಕಾರಿಯಾಗುವಂತೆ ಪರಿಸರ ರಕ್ಷಣೆ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು....

Close