ರಿಕ್ಷಾ ಚಾಲಕರು ಜನಸಾಮಾನ್ಯರಿಗೆ ಸಹಕಾರಿ

ಹಳೆಯಂಗಡಿ: ಗ್ರಾಮೀಣ ಶ್ರಮಿಕ ವರ್ಗದಜನರಾದ ರಿಕ್ಷಾ ಚಾಲಕರು ಜನಸಾಮಾನ್ಯರಿಗೆ ಸಹಕಾರಿಯಾಗುವಂತೆ ಪರಿಸರ ರಕ್ಷಣೆ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಶಾಸಕರ ನಿಧಿಯಿಂದ ಹಳೆಯಂಗಡಿ ಬಸ್ಸು ನಿಲ್ದಾಣ ಬಳಿಯ ರಿಕ್ಷಾ ಪಾರ್ಕ ಅಂಗಣದ 2ಲಕ್ಷರೂ ವೆಚ್ಚದ ಇಂಟರ್‌ಲಾಕ್ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಬಡಜನರ ಅಭಿವೃದ್ಧಿಗಾಗಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಬ್ಯಾಂಕ್ ಬಾಗಿಲು ತೆರೆಡಿಡುವಂತೆ ಮಾಡಿದ ಪರಿಣಾಮ ಇಂದು ಬಡ ಜನರು ಸ್ವಾವಲಂಭಿಯಾಗಿ ಜೀವನ ನಿರ್ವಹಿಸಲು ಸಾಧ್ಯವಾಗಿದೆ.ದುಶ್ಚಟಗಳಿಂದ ದೂರವಿದ್ದು ಜೀವನದ ಗಳಿಕೆಯನ್ನು ಕೌಟುಂಬಿಕ ಉನ್ನತಿಗೆ ವಿನಿಯೋಗಿಸುವ ಮೂಲಕ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು ಎಂದರು. ರಿಕ್ಷಾ ಚಾಲಕರು ತಮ್ಮ ಪಾರ್ಕ್ ಮತ್ತು ಇನ್ನಿತರ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸುವುದಾದಲ್ಲಿ ಅರಣ್ಯ ಇಲಾಖೆಯಿಂದ ಉಚಿತವಾಗಿ ಗಿಡ ನೀಡಲಾಗುವುದು ಎಂದರು.
ಪ್ರಗತಿಪರ ಗ್ರಾಮ ಹಳೆಯಂಗಡಿ: ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಳೆಯಂಗಡಿ ಗ್ರಾಮವು ಬಹಳ ಅಭಿವೃದ್ಧಿ ಪಥದಲ್ಲಿದ್ದು ಸರಕಾರದ ಅನುದಾನಗಳನ್ನು ಉತ್ತಮವಾಗಿ ವಿನಿಯೋಗಿಸುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹಳೆಯಂಗಡಿ ಪಂಚಾಯಿತಿಯನ್ನು ಶಾಸಕರು ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ವಹಿಸಿದ್ದರು.ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷ ವಸಂತ ಬೆರ್ನಾಡ್, ಸದಸ್ಯರಾದ ಎಚ್. ಹಮೀದ್, ಅಬ್ದುಲ್ ಬಶೀರ್, ಅಬ್ದುಲ್‌ಖಾದರ್, ಚಿತ್ರಾ ಸುರೇಶ್, ಅಬ್ದುಲ್‌ಅಝೀಝ್, ಪ್ರವೀಣ್ ಸಾಲ್ಯಾನ್, ವಿನೋದ್‌ಕುಮಾರ್, ಲೀಲಾ, ಸುಕೇಶ್ ಪಾವಂಜೆ, ಜಯಂತಿ, ಸುಗಂಧಿ, ಶರ್ಮಿಳಾ ಎಸ್. ಕೋಟ್ಯಾನ್, ಬೇಬಿ ಸುಲೋಚನ, ಅಶೋಕ್ ಬಂಗೇರ, ಅನಿಲ್ ಕುಮಾರ್, ಚಿತ್ರಾ ಸುಕೇಶ್, ಚಂದ್ರಕುಮಾರ್, ಗುಣವತಿ, ಮಾಲತಿ ಡಿ. ಕೋಟ್ಯಾನ್,ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕದಿಕೆ.ಸಾಹುಲ್ ಹಮೀದ್ ಕದಿಕೆ,ಉದ್ಯಮಿ ಶಶೀಂದ್ರ ಸಾಲ್ಯಾನ್,ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತುಬಾವ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮತ್ತಿತರರು ಉಪಸ್ಥಿತರಿದ್ದರು. ಚಂದ್ರಶೇಖರ ಕದಿಕೆ ಸ್ವಾಗತಿಸಿದರು.ಹಾರಿಸ್ ನಿರೂಪಿಸಿದರು.

Mulki-18081701

Comments

comments

Comments are closed.

Read previous post:
Kinnigoli-17081706
ಅತ್ತೂರು ಕಾಫಿಕಾಡು ಮೊಸರು ಕುಡಿಕೆ

ಕಿನ್ನಿಗೋಳಿ : ಫ್ರೆಂಡ್ಸ್ ಕ್ಲಬ್ ಅತ್ತೂರು ಕಾಫಿಕಾಡು ಇದರ 13 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮಂಗಳವಾರ ನಡೆಯಿತು.

Close