ಮೂಲ್ಕಿ -ರಾಜ್ಯ ಪ್ರಶಸ್ತಿ

ಮೂಲ್ಕಿ: ಮೂಲ್ಕಿಯ ಉದ್ಯಮಿ ಜೀವನ್ ಕೆ.ಶೆಟ್ಟಿಯವರಿಗೆ ಬೆಂಗಳೂರಿನ ಸಮರ್ಥ ಪ್ರಕಾಶನ ಕೊಡಮಾಡಿರುವ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಲಭಿಸಿದೆ.
ಮೂಲ್ಕಿಯ ಪ್ರತಿಷ್ಠಿತ ಶಾರದಾ ಇನ್ಫ್ರಾಡಿಸೈನ್ ಇಂಡಿಯಾ ಪ್ರೈ.ಲಿ.ನ ಆಡಳಿತ ನಿರ್ದೇಶಕರಾಗಿರುವ ಜೀವನ್ ಶೆಟ್ಟಿಯವರು ತಮ್ಮ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದೆ.
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ಈಗಾಗಲೇ ದೆಹಲಿಯ ರಾಷ್ಟ್ರೀಯ ಗೌರವ ಪ್ರಶಸ್ತಿ,ಸರ್ ಎಮ್.ವಿಶ್ವೇಶ್ವರಯ್ಯ ಬೆಸ್ಟ್ ಇಂಜಿನಿಯರಿಂಗ್ ರಾಷ್ಟ್ರೀಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಕೃಷ್ಣರಾಜ ಪರಿಷನ್ಮಂದಿರದ ರಾಷ್ಟ್ರಪಿತ ಮಹಾತ್ಮಾಗಾಂಧಿ ವೇದಿಕೆಯಲ್ಲಿ ಸಮರ್ಥ ಪ್ರಕಾಶನದ ಕೃತಿ ಬಿಡುಗಡೆ ಸಮಾರಂಭದಲ್ಲಿ ನಾಡಿನ ಹಿರಿಯ ಸಾಹಿತಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ.ದೊಡ್ಡರಂಗೇಗೌಡರ ಉಪಸ್ಥಿತಿಯಲ್ಲಿ ಕರ್ನಾಟಕ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೊಡೇಪಿ ಕೃಷ್ಣರವರು ಜೀವನ್ ಶೆಟ್ಟಿಯವರಿಗೆ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.

Mulki-09091702

Comments

comments

Comments are closed.

Read previous post:
Mulki-18081705
ಸುವರ್ಣ ವಿನ್ಯಾಸ ಪ್ರಶ್ನಾ ಚಿಂತನೆ

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗುರುವಾರ ಕ್ಷೇತ್ರದಲ್ಲಿ ಸ್ವರ್ಣ ವಿನ್ಯಾಸ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿಗಳ ಪ್ರಧಾನ ಪೌರೋಹಿತ್ಯದಲ್ಲಿ ಮತ್ತು ದೈವಜ್ಞರಾದ...

Close