ಫೆಂಡಲ್ ವ್ಯವಸ್ಥೆ ಹಾಗೂ ವಿದ್ಯುತ್ ಬೆಳಕಿನ ವ್ಯವಸ್ಥೆ

ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮ ಸಾಂಗವಾಗಿ ನಡೆಯಲು ಕಾರ್ಯಕ್ರಮ ಸಂಯೋಜಕರು ಸೂಕ್ತ ಕ್ರಮ ನಿಭಂದನೆಗಳನ್ನು ಪಾಲಿಸುವುದು ಬಹಳ ಅಗತ್ಯವಿದೆ ಎಂದು ಮೂಲ್ಕಿ ಪೋಲೀಸ್ ನೀರೀಕ್ಷಕ ಅನಂತ ಪದ್ಮನಾಭ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಸಭೆಯಲ್ಲಿ ಮಾಹಿತಿಗಳನ್ನು ನೀಡಿದರು.
ಗಣೇಶ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಫೆಂಡಲ್ ವ್ಯವಸ್ಥೆ ಹಾಗೂ ಸೂಕ್ತ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡುವುದು ಮತ್ತು ಬೆಂಕಿ ನಂದಿಸುವ ಉಪಕರಣಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳುವುದು. ಧ್ವನಿ ವರ್ಧಕ ಬಳಸುವ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆಯಿಂದ ಮೈಕ್ ಲೈಸನ್ ಪಡೆಯಬೇಕು. ಗಣೇಶ ಮಂಟಪದ ಹತ್ತಿರ ಮನರಂಜನೆ ಕಾರ್ಯಕ್ರಮ ನಡೆಯುವ ಸಮಯ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು\ಸಂಘಟಿಕರನ್ನು ನೇಮಿಸತಕ್ಕದು, ಗಣೇಶ ಮಂಟಪದ ಸುತ್ತ ಮುತ್ತ ಸಿಸಿ ಕ್ಯಾಮರಾದ ವ್ಯವಸ್ಥೆಯನ್ನು ಮಾಡುವುದು, ಸಾರ್ವಜನಿಕ ರಸ್ತೆಯಲ್ಲಿ ವಾಹನ ಮತ್ತು ಜನರ ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬಾರದು, ಗಣೇಶ ಮಂಟಪದ ಹತ್ತಿರ ಗಣೇಶ ವಿಗ್ರಹ ಹಾಗೂ ಅಮೂಲ್ಯ ಅಭರಣಗಳ ರಕ್ಷಣೆಗಾಗಿ 24 ಗಂಟೆ ಸರದಿ ಪ್ರಕಾರದಲ್ಲಿ ಕಾವಲು ನೇಮಿಸಲು ಹಾಗೂ ಕೋಮು ಪ್ರಚೋದನೆ ಮಾಡುವಂತಹ ಕೃತ್ಯಗಳು ನಡೆಯದಂತೆ ವಿಶೇಷ ಮುನ್ನೆಚರಿಕೆ ಕ್ರಮ ಕೈಗೊಳ್ಳವುದು, ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಮಾಹಿತಿ ನೀಡಲು ಧ್ವನಿ ವರ್ಧಕಗಳನ್ನು ಸಮರ್ಪಕವಾಗಿರಿಸಿಕೊಳ್ಳುವುದು, ಗಣೇಶ ಪ್ರತಿಷ್ಠಾಪನೆಗಾಗಿ ಯಾರು ಬಲವಂತವಾಗಿ ವಂತಿಕೆ ವಸೂಲಿ ಮಾಡಬಾರದು, ಮೆರವಣೆಗೆಯಲ್ಲಿ ಯಾವುದೇ ಧಾರ್ಮಿಕ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವುದಗಾಗಲೀ ಅಥವಾ ಯಾವುದೇ ವ್ಯಕ್ತಿ ಮತ್ತು ಧರ್ಮಕ್ಕೆ ನೋವು ಉಂಟುಮಾಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಬಾರದು, ಮೆರವಣಿಗೆ ಸಮಯದಲ್ಲಿ ಟ್ಯಾಬ್ಲೋಗಳಿಗೆ ಸರಿಯಾದ ರೀತಿಯಲ್ಲಿ ಜನರೇಟರ್ ಮತ್ತು ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡುವುದು, ಅನ್ಯ ಧರ್ಮಗಳಿಗೆ ಧಕ್ಕೆಯಾಗುವುವಂತ ಟ್ಯಾಬ್ಲೋಗಳನ್ನು ಉಪಯೋಗಿಸಬಾರದು, ಮೆರವಣಿಗೆಯ ಸಮಯ ಸ್ವಯಂ ಸೇವಕರು ಕಡ್ಡಾಯವಾಗಿ ಗುರುತು ಪತ್ರದ ಬ್ಯಾಡ್ಜ್‌ನ್ನು ಧರಿಸುವುದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೋದಿಗೆ ಸಹಕರಿಸುವುದು, ಗಣಪತಿ ವಿಗ್ರಹ ಸಾಗಿಸುವ ವಾಹನ ಸುಸಿತ್ಥಿಯಲ್ಲಿ ಇದೆಯೇ ಎಂಬುದರ ಬಗ್ಗೆ ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು, ಗಣೇಶ ದರ್ಶನಕ್ಕೆ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದು, ಪೂರ್ವ ನಿಗದಿಪಡಿಸಿದ ಮಾರ್ಗದಲ್ಲಿ ವಿರ್ಸಜನೆ ಮೆರವಣಿಗೆ ಹೋಗಬೇಕು ಹಾಗೂ ವಿಸರ್ಜನೆ ಸ್ಥಳ ಮುಂಚಿತವಾಗಿ ತಿಳಿಸಬೇಕು, ಗಣೇಶ ಹಬ್ಬದ ಆಚರಣೆ ಕಾಲಕ್ಕೆ ಮತ್ತು ವಿಸರ್ಜನೆ ಕಾಲಕ್ಕೆ ಕಾನೂನು ಭಂಗ ಮಾಡುವ ಯಾವುದೇ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರಗಿಸಲಾಗುದು ಎಂದರು.
ಈ ಸಂದರ್ಭ ಉಪ ನೀರೀಕ್ಷಕ ಸಾಂತಪ್ಪ, ಸಹಾಯಕ ಉಪ ನಿರೀಕ್ಷಕ ಚಂದ್ರಶೇಖರ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ, ಹಾಗೂ ವಿವಿಧ ಗಣೇಶೋತ್ಸವ ಸಮಿತಿಯ ಸಂಘಟಕರು ಉಪಸ್ಥಿತರಿದ್ದರು.

Mulki-18081704

Comments

comments

Comments are closed.

Read previous post:
Mulki-18081703
ಹೋಬಳಿ ಮಟ್ಟದ ಕಬ್ಬಡ್ಡಿ ಪಂದ್ಯಾಕೂಟ

ಮೂಲ್ಕಿ: ಸರಕಾರಿ ಶಾಲೆಗಳಲ್ಲಿ ಸರ್ವಾಗೀಣ ಶಿಕ್ಷಣದ ಜೊತೆಯಲ್ಲಿ ಉತ್ತಮ ಗುಣ ಮಟ್ಟದ ಕ್ರೀಡಾಬ್ಯಾಸದ ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ಲಭಿಸುವ ಕಾರಣ ಕನ್ನಡ ಶಾಲೆ ಎಂಬ ಕೀಳರಿಮೆಯನ್ನು ಬಿಟ್ಟು...

Close