ಸುವರ್ಣ ವಿನ್ಯಾಸ ಪ್ರಶ್ನಾ ಚಿಂತನೆ

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗುರುವಾರ ಕ್ಷೇತ್ರದಲ್ಲಿ ಸ್ವರ್ಣ ವಿನ್ಯಾಸ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿಗಳ ಪ್ರಧಾನ ಪೌರೋಹಿತ್ಯದಲ್ಲಿ ಮತ್ತು ದೈವಜ್ಞರಾದ ಗಿರೀಶ್ ಪೊದುವಾಳ್ ಉಪ್ಪಳ ಇವರ ಪ್ರಶ್ನಾ ಚಿಂತನೆಯೊಂದಿಗೆ ಪ್ರಾರಂಭಗೊಂಡಿತು.
ಕ್ಷೇತ್ರದ ಅರ್ಚಕರಾದ ಶ್ರೀಕೃಷ್ಣದಾಸ ಭಟ್ ಮತ್ತು ಶ್ರೀಪತಿ ಉಪಾದ್ಯಾಯರಿಂದ ವಿಶೇಷ ಪ್ರಾರ್ಥನೆ ನಡೆದು ಪ್ರಶ್ನಾ ಚಿಂತನೆ ಆರಂಭಗೊಂಡಿತು. ವೈದಿಕರಾದ ಅತ್ತೂರು ವೆಂಕಟರಾಜ ಉಡುಪ,ಕೊಲೆಕಾಡಿ ವಾದಿರಾಜ ಉಪಾದ್ಯಾಯ, ,ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವಾ, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಪುನರೂರು,ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿ, ,ಉದಯ ಶೆಟ್ಟಿ,ಎಚ್.ವಿ.ಕೋಟ್ಯಾನ್, ಸುನಿಲ್ ಆಳ್ವಾ, ದೊಡ್ಡಣ್ಣ ಮೊಲಿ.ಗುರುವಪ್ಪ ಕೋಟ್ಯಾನ್ ಹೆಜಮಾಡಿ, ಬೂಬ ಶೆಟ್ಟಿಗಾರ್ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು. ಅಗಷ್ಟು ೨೮ರಿಂದ ಶ್ರೀ ಕ್ಷೇತ್ರದಲ್ಲಿ ಅಷ್ಟಮಂಗಳ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

Mulki-18081705

Comments

comments

Comments are closed.

Read previous post:
Mulki-18081704
ಫೆಂಡಲ್ ವ್ಯವಸ್ಥೆ ಹಾಗೂ ವಿದ್ಯುತ್ ಬೆಳಕಿನ ವ್ಯವಸ್ಥೆ

ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮ ಸಾಂಗವಾಗಿ ನಡೆಯಲು ಕಾರ್ಯಕ್ರಮ ಸಂಯೋಜಕರು ಸೂಕ್ತ ಕ್ರಮ ನಿಭಂದನೆಗಳನ್ನು ಪಾಲಿಸುವುದು ಬಹಳ ಅಗತ್ಯವಿದೆ ಎಂದು ಮೂಲ್ಕಿ ಪೋಲೀಸ್ ನೀರೀಕ್ಷಕ...

Close