ಹೋಬಳಿ ಮಟ್ಟದ ಕಬ್ಬಡ್ಡಿ ಪಂದ್ಯಾಕೂಟ

ಮೂಲ್ಕಿ: ಸರಕಾರಿ ಶಾಲೆಗಳಲ್ಲಿ ಸರ್ವಾಗೀಣ ಶಿಕ್ಷಣದ ಜೊತೆಯಲ್ಲಿ ಉತ್ತಮ ಗುಣ ಮಟ್ಟದ ಕ್ರೀಡಾಬ್ಯಾಸದ ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ಲಭಿಸುವ ಕಾರಣ ಕನ್ನಡ ಶಾಲೆ ಎಂಬ ಕೀಳರಿಮೆಯನ್ನು ಬಿಟ್ಟು ಹೆತ್ತವರು ಸರಕಾರಿ ಶಾಲೆಗಳತ್ತ ಗಮನಹರಿಸಬೇಕು ಎಂದು ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಇಂದು ಎಂ ಹೇಳಿದರು.
ಮೂಲ್ಕಿ ಕೆ.ಎಸ್.ರಾವ್ ನಗರದ ಸರಕಾರಿ ಶಾಲೆಯಲ್ಲಿ ಗುರುವಾರ ನಡೆದ ಬಾಲಕರ ಮತ್ತು ಬಾಲಕಿಯರ ಹೋಬಳಿ ಮಟ್ಟದ ಕಬ್ಬಡ್ಡಿ ಪಂದ್ಯಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಕ್ರಿಡೆಯೂ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಶಾಲೆಯಲ್ಲಿ ಲಭಿಸುವ ಕ್ರೀಡಾ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿ ಶೈಕ್ಷಣಿಕ ಸಾಧಕರಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ಆಸೀಪ್ ವಹಿಸಿದ್ದರು.
ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ್ ಪುತ್ರನ್, ಮೂಲ್ಕಿ ನಗರ ಪಂಚಾಯಿತಿ ಸದಸ್ಯರಾದ ಮೀನಾಕ್ಷಿ ಬಂಗೇರಾ, ಶೈಲೇಶ್ ಕುಮಾರ್, ಹಸನ್ ಬಶೀರ್ ಕುಲಾಯಿ,ಉದ್ಯಮಿ ಎ.ಎಚ್.ಖಾದರ್ ಗಣೇಶ್ ಶೆಟ್ಟಿಗಾರ್,ಜಯರಾಂ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾದ್ಯಾಯಿನಿ ಸುಮತಿ ಬಾ ಸ್ವಾಗತಿಸಿದರು.ಗ್ರೇಸಿ ಗೋಮ್ಸ್ ನಿರೂಪಿಸಿದರು. ಸುಭಾಷಿಣಿ ವಂದಿಸಿದರು.

Mulki-18081703

Comments

comments

Comments are closed.

Read previous post:
Mulki-18081702
ಭಜನಾ ಸಂಕೀರ್ಥನೆ

ಮೂಲ್ಕಿ: ಏಕಾಗ್ರತೆಯಿಂದ ನಡೆಸುವ ಭಜನಾ ಸಂಕೀರ್ಥನೆ ಭಗವಂತನನ್ನು ಮೆಚ್ಚಿಸಲು ಬಹು ಸಹಕಾರಿ ಎಂದು ದೈವಜ್ಞ ರಾಮಚಂದ್ರ ಭಟ್ ಹೇಳಿದರು. ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಸಿಂಹ ಮಾಸದ ಒಂದು...

Close