ಪಂಜ ಕೆಸರು ಗದ್ದೆ ಕ್ರೀಡಾಕೂಟ

ಕಿನ್ನಿಗೋಳಿ: 50 ವರ್ಷಗಳ ಹಿಂದಿನ ಹಾಗೂ ಇಂದಿನ ಕೃಷಿ ಬದುಕು ಬಹಳಷ್ಟು ಬದಲಾವಣೆಗಲಾಗಿವೆ. ಸರಕಾರ ಕೃಷಿ ಕಾರ್ಯ ನಡೆಸಲು ಪ್ರೋತ್ಸಾಹ ಯೋಜನೆಗಳನ್ನು ಕಾರ್ಯಗತ ಮಾಡಿದೆ ಜನರು ಅದರ ಸುಪಯೋಗಪಡಿಸಬೇಕು ಎಂದು ಮುಲ್ಕಿ ಮೂಡಬಿದೆರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು
ಪಂಜ ಶ್ರೀ ವಿಠೋಭ ಭಜನಾ ಮಂಡಳಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದಿಂದ ಪಂಜ- ಮದ್ಯ ಕೂಡು ರಸ್ತೆಯ ಪಂಜ ಬಾಕಿಮಾರುಗುತ್ತು ಕೆರೆಯ ಬಳಿ ನಡೆದ ತುಳುನಾಡ ಮಣ್ಣ್‌ಡ್ ಕೆಸರ್ದ ಗೊಬ್ಬು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಯುವ ಪೀಳಿಗೆ ಕೃಷಿಯತ್ತ ಮುಖ ಮಾಡಬೇಕು. ನಮ್ಮ ಸಂಸ್ಕ್ರತಿ ಸಂಸ್ಕರವನ್ನು ಉಳಿಸಿ ಬೆಳೆಸಬೇಕು ಎಂದರು
ಈ ಸಂದರ್ಭ ಹಿರಿಯ ಕೃಷಿಕ ಜಯ ಶೆಟ್ಟಿ ಪಂಜ ನಲ್ಯ ಗುತ್ತು ಮತ್ತು ಹಿರಿಯ ಜನಪದ ವಾದಕ ಕರಿಯ ಪಂಜ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಅಧಿಕ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಾದ ವಿನುತ ಶೆಟ್ಟಿ, ಲಕ್ಷೀ ಹರೀಶ್ ಶೆಟ್ಟಿ, ಶಿಲ್ಪ ಶರಣ್ಯ ಆಚಾರ್ಯ, ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಪ್ರತೀಕ್ಷ ಶೆಟ್ಟಿ, ವಿನುತಾ ಬಾರ್ಗವಿ, ಸೃಷ್ಠಿ ವಿ ಶೆಟ್ಟಿ, ಸ್ವಾಮ್ಯ ಯು.ಎ, ಚೈತ್ರ ಸುರೇಶ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪಂಜ ಬಾಸ್ಕರ ಭಟ್ ಆಶೀರ್ವಚನ ನೀಡಿದರು. ವಿಠೋಭ ಭಜನಾ ಮಂಡಳಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪಂಜದ ಗುತ್ತು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಪಿ ಶೆಟ್ಟಿ, ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಸದಸ್ಯ ಸುರೇಶ್ ಪಂಜ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲ್, ಮಾತಾ ಡೆವಲಪರ್ಸ್ ನ ಸಂತೋಷ್ ಕುಮಾರ್ ಶೆಟ್ಟಿ, ಬೈಕಂಪಾಡಿ ರೋಟರಿ ಅಧ್ಯಕ್ಷ ಜಯ ಕುಮಾರ್, ಪಡುಪಣಂಬೂರು ಪಿ.ಸಿ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುಬೈಲು, ಉದ್ಯಮಿಗಳಾದ ಭುವನೇಶ್, ರಾಜು ಸುಂದರಂ, ಸುಧಾಕರ ಪೂಂಜ, ಕೃಷ್ಣ ಶೆಟ್ಟಿ, ಪ್ರವೀಣ್ ಅಳ್ವ ಪಂಜಗುತ್ತು, ರಮೇಶ್ ಡಿ ಶೆಟ್ಟಿ ಪಂಜ ಬಾಕಿಮಾರು ಗುತ್ತು, ಪ್ರಕಾಶ್ ಟಿ. ಶೆಟ್ಟಿ ಪಂಜ ನಲ್ಯಗುತ್ತು, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಶೆಟ್ಟಿ, ಯಶೋಧರ ಸಾಲಿಯಾನ್ ಹಳೆಯಂಗಡಿ, ಸಿತಾರಾ ಎಲ್ ಶೆಟ್ಟಿ ಮುಂಬೈ, ಮತ್ತಿತರರು ಉಪಸ್ಥಿತರಿದ್ದರು.
ಪಂಜ ಬೈಲ ಗುತ್ತು ಸತೀಶ್ ಎಂ ಶೆಟ್ಟಿ ಸ್ವಾಗತಿಸಿದರು, ಉಪಾನ್ಯಾಸಕಿ ಅರ್ಪಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-18081701

Comments

comments

Comments are closed.

Read previous post:
Mulki-09091702
ಮೂಲ್ಕಿ -ರಾಜ್ಯ ಪ್ರಶಸ್ತಿ

ಮೂಲ್ಕಿ: ಮೂಲ್ಕಿಯ ಉದ್ಯಮಿ ಜೀವನ್ ಕೆ.ಶೆಟ್ಟಿಯವರಿಗೆ ಬೆಂಗಳೂರಿನ ಸಮರ್ಥ ಪ್ರಕಾಶನ ಕೊಡಮಾಡಿರುವ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಲಭಿಸಿದೆ. ಮೂಲ್ಕಿಯ ಪ್ರತಿಷ್ಠಿತ ಶಾರದಾ ಇನ್ಫ್ರಾಡಿಸೈನ್ ಇಂಡಿಯಾ ಪ್ರೈ.ಲಿ.ನ ಆಡಳಿತ...

Close