ಸಂಸ್ಮರಣಾ ಉದ್ಘಾಟನಾ ಸಮಾರಂಭ

ಕಿನ್ನಿಗೋಳಿ: ಕಟೀಲು ಗೋಪಾಲ ಕೃಷ್ಣ ಆಸ್ರಣ್ಣರು ದುರ್ಗೆಯ ಅನನ್ಯ ಭಕ್ತರು ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದರು ಎಂದು ಕರ್ನಾಟಕ ಬ್ಯಾಂಕ್ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ಜಯರಾಮ ಭಟ್ ಹೇಳಿದರು.
ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಶನಿವಾರ ನಡೆದ ದಿ. ಗೋಪಾಲಕೃಷ್ಣ ಅಸ್ರಣ್ಣ ಅವರ 25 ನೇ ಸಂಸ್ಮರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಕೊಲಕಾಡಿ ವಾದಿರಾಜ ಉಪಾಧ್ಯಾಯ, ಲಿಂಗಪ್ಪ ಶೇರಿಗಾರ್ ಕಟೀಲು, ಸೌಮ್ಯಾ ಭಟ್, ಮುಚ್ಚೂರು ರಾಮಚಂದ್ರ ಭಟ್, ರಮೇಶ್ ಕಲ್ಲಡ್ಕ, ಗೋಪಾಲಕೃಷ್ಣ ಉಪಾಧ್ಯಾಯ, ಕಾವೂರು ಶ್ರೀಮತಿ ಆರತಿ ಶೆಟ್ಟಿ ಮಂಗಳೂರು, ಕುಮಾರಿ ತೀರ್ಥ ಕಟೀಲು, ನಾರಾಯಣ ಆಚಾರ್ಯ ಕಲ್ಲಮುಂಡ್ಕೂರು, ಚಂದ್ರಕಾಂತ ನಾಯಕ್, ಧೃತಿ ಕುಲಾಲ್ ಪದ್ಮನೂರು ಅವರನ್ನು ಸನ್ಮಾನಿಸಲಾಯಿತು.
ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣರ ಭಾವಚಿತ್ರದ ಮೆರವಣಿಗೆಯನ್ನು ಜ್ಯೋತಿಷ್ಯ ಹಾಗೂ ಅರ್ಚಕ ಪ್ರಸನ್ನ ಆಚಾರ್ಯ ನಿಟ್ಟೆ ಉದ್ಘಾಟಿಸಿದರು.
ಧಾರ್ಮಿಕ ಹಿತ ಚಿಂತಕ ಪಂಜ ಬಾಸ್ಕರ ಭಟ್ ಶುಭಾಶಂಸನೆಗೈದರು.
ಮುಂಬೈ ಉದ್ಯಮಿ ಅತ್ತೂರು ಹೊಸಲೊಟ್ಟು ಬಾಬು ಎನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ರವಿತೇಜ ಸಾಧಕರನ್ನು ಸನ್ಮಾನಿಸಿದರು.
ಮಂಗಳೂರು ಮೇಯರ್ ಕವಿತಾ ಸನಿಲ್, ಅರವಿಂದ ಮೋಟಾರ‍್ಸ್ ಆಡಳಿತ ನಿರ್ದೇಶಕ ಕಿಶೋರ್ ರಾವ್, ಪುತ್ತಿಗೆ ರಾಘು ಭಟ್, ಉದ್ಯಮಿ ಗಣೇಶ್ ಶೆಟ್ಟಿ ಐಕಳ, ನೀಲೇಶ್ ಶೆಟ್ಟಿಗಾರ್, ಭುಜಂಗ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಸತ್ಯಜಿತ್ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ವಂದಿಸಿದರು. ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಕಟೀಲಿನ ಅಜಾರಿನಿಂದ ಕಾರ್ಯಕ್ರಮದ ಸಭಾಭವನದವರೆಗೆ ದಿ ಗೋಪಾಲಕೃಷ್ಣ ಆಸ್ರಣ್ಣರ ಭಾವಚಿತ್ರದ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಗಾನ ವೈಭವ ಕಾರ್ಯಕ್ರಮ ನಡೆಯಿತು.

Kinnigoli-21081703

Comments

comments

Comments are closed.

Read previous post:
Kinnigoli-21081702
ಪರಿಸರ ಪ್ರೇಮಿ ಸಮಿತಿ ಭೇಟಿ

ಕಿನ್ನಿಗೋಳಿ: ಇತ್ತೀಚಿಗೆ ಅಸಹಜ ಸಾವನ್ನಪ್ಪಿದ ವಿದ್ಯಾರ್ಥಿನಿ ಕಾವ್ಯಾಳ ಕಟೀಲು ದೇವರಗುಡ್ಡೆಯ ಮನೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿ...

Close