ಎಳತ್ತೂರು : ರಾಮಚಂದ್ರ ರಾವ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಹೊಟೇಲ್ ಉದ್ಯಮಿ ಎಳತ್ತೂರು ರಾಮಚಂದ್ರ ರಾವ್ ನಿಧನ ಹೊಂದಿದ್ದು, ಅವರ ಬಗ್ಗೆ ಶ್ರದ್ಧಾಂಜಲಿ ಸಭೆ ಭಾನುವಾರ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಠಾರದಲ್ಲಿ ನಡೆಯಿತು.
ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಮಾತನಾಡಿ ದೇವಳದ ಅಭಿವೃದ್ಧಿಯಲ್ಲಿ ಮುತುವರ್ಜಿಯಿಂದ ಕೈ ಜೋಡಿಸಿದ್ದರು ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಮಾತನಾಡಿ ರಾಮಚಂದ್ರ ರಾಯರು ನಿಗರ್ವಿ ಸರಳ ಸಜ್ಜನರಾಗಿದ್ದರು. ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ಅಪಾರ ಕಾಳಜಿ ಹೊಂದಿದ್ದರು ಎಂದರು.
ಹಿರಿಯರಾದ ಟಿ. ನರಸಿಂಹ ಭಟ್, ಭೂತೆತ್ತರ ಜಯ ಶೆಟ್ಟಿ , ಪ್ರಕಾಶ್ ಹೆಗ್ಡೆ ಎಳತ್ತೂರು, ರಾಘವೇಂದ್ರ ಭಟ್, ಶಂಕರ ಶೆಟ್ಟಿ , ಶರತ್ ಶೆಟ್ಟಿ , ಹರಿಯಪ್ಪ ಶೆಟ್ಟಿ , ಕಿಟ್ಟ ಶೆಟ್ಟಿ , ಪ್ರಕಾಶ್ ದೇವಾಡಿಗ, ಕುಟ್ಟಿ ದೇವಾಡಿಗ, ರಮೇಶ ಪೂಜಾರಿ, ಸಚಿನ್, ಜ್ಯೋತಿ ಎಸ್ ಹೆಗ್ಡೆ , ಶಕುಂತಳಾ ಶೆಟ್ಟಿ , ಜಯಶ್ರೀ, ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-21081705

Comments

comments

Comments are closed.

Read previous post:
Kinnigoli-21081704
ತುಳು ಕನ್ನಡ ವೆಲ್ಪೇರ್ ಅಸೋಸಿಯೆಶನ್ ಬೇಟಿ

ಕಿನ್ನಿಗೋಳಿ: ಮೂಡಬಿದಿರೆಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದ ಕಟೀಲು ದೇವರಗುಡ್ಡೆ ನಿವಾಸಿ ಕಾವ್ಯ ಪೂಜಾರಿ ಮನೆಗೆ ತುಳು ಕನ್ನಡ ವೆಲ್ಪೇರ್ ಅಸೋಸಿಯೆಶನ್ (ರಿ) ಕಾಮೋಟೆ ಇದರ ಅಧ್ಯಕ್ಷ ಸಮಾಜ ಸೇವಕ...

Close