ಕಾಲಚಕ್ರದೊಳಗೆ ಕೃತಿ ಬಿಡುಗಡೆ

ಕಿನ್ನಿಗೋಳಿ: ಸಮಾಜಮುಖಿ ಚಿಂತನೆಯ ಕುಂದು ಕೊರತೆಗಳನ್ನು ತಿದ್ದಿ ತೀಡುವ ಸಾಹಿತ್ಯ ಲೇಖನಿಯಲ್ಲಿ ಮೂಡಿ ಬರಬೇಕು ಎಂದು ಕಟೀಲು ದೇವಳ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಹೇಳಿದರು.
ಬುಧವಾರ ಕಟೀಲು ಸರಸ್ವತೀ ಸದನದಲ್ಲಿ ಕಿನ್ನಿಗೋಳಿ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ ಕುಮಾರಿ ಶ್ಯಾಮಿಲಿ ರಚಿತ ಕವನ ಸಂಕಲನ ಕಾಲಚಕ್ರದೊಳಗೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಕೃತಿಯನ್ನು ಬಿಡುಗಡೆಗೊಳಿಸಿದರು.
ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಟಿ.ಎ.ಎನ್. ಖಂಡಿಗೆ, ಪಾಂಡುರಂಗ ಭಟ್ ಕಟೀಲು, ಪ್ರಕಾಶಕ ಸಚ್ಚಿದಾನಂದ ಉಡುಪ ಉಪಸ್ಥಿತರಿದ್ದರು.
ಶ್ಯಾಮಿಲಿ ಸ್ವಾಗತಿಸಿದರು. ಗಾಯತ್ರಿ ಉಡುಪ ಕಾರ್ಯಕ್ರಮ ನಿರೂಪಿಸಿದರು.

Kinnigoli-2608201702

Comments

comments

Comments are closed.

Read previous post:
Kinnigoli-2608201701
ಯೋಗ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Close