ಕೆರೆಕಾಡು ಗಣಪತಿ ಧಾರ್ಮಿಕ ಸಭೆ

ಕಿನ್ನಿಗೋಳಿ: ಗಣೇಶ ಚರ್ತುರ್ಥಿ, ನವರಾತ್ರಿ, ದೀಪಾವಳಿ ಯಂತಹ ಆಚರಣೆಗಳು ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಬಿಂಬಿಸುವ, ಪ್ರಕೃತಿಯನ್ನು ಪೂಜಿಸುವ ಆರಾಧನಾ ಪದ್ಧತಿಯಾಗಿದ್ದು ನಮ್ಮ ಬದುಕು ಅದನ್ನು ಅವಲಂಬಿಸಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ ಹೇಳಿದರು.
ಶನಿವಾರ ಕೆರೆಕಾಡು ಶ್ರೀ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿ ಜಾನಪದ, ವೇದ, ವೇದೋತ್ತರ ಕಾಲದಲ್ಲೂ ಗಣಪತಿಯ ಆರಾಧನೆ ಮಹತ್ವ ಪಡೆದಿದ್ದು ನಾಡಿನ ಎಲ್ಲಾ ಕಡೆಯಲ್ಲೂ ಗಣೇಶನಿಗೆ ಪ್ರಥಮ ಆರಾಧನೆ ನಡೆಯುತ್ತಿದೆ ಎಂದು ಹೇಳಿದರು.
ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ ಅಧ್ಯಕ್ಷತೆ ವಹಿಸಿದ್ದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಸಂತ್ ಬೆರ್ನಾಡ್, ಉದ್ಯಮಿ ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಕೆರೆಕಾಡು ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ಸುರೇಶ್ ರಾವ್ ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿ ಅದ್ಯಕ್ಷ ಪಿ. ಆರ್. ರಾಜೇಶ್ ಕೆರೆಕಾಡು ಸ್ವಾಗತಿಸಿದರು. ರವೀಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-31081703

Comments

comments

Comments are closed.

Read previous post:
Kinnigoli-31081702
ಬಾಲಗಣೇಶೋತ್ಸವ- ಶೋಭಾಯಾತ್ರೆ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರ ಬಾಲಗಣೇಶೋತ್ಸವದ ಶೋಭಾಯಾತ್ರೆ ಶನಿವಾರ ನಡೆಯಿತು.  

Close