ಕಿನ್ನಿಗೋಳಿ ಶ್ರೀ ಗಣೇಶೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ: ಸಾಮೂಹಿಕ ಧಾರ್ಮಿಕ ಆಚರಣೆಯಿಂದ ಧರ್ಮಜಾಗೃತಿಯೊಂದಿಗೆ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಶ್ರದ್ಧೆ ಮೂಡಲು ಸಾಧ್ಯ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಶನಿವಾರ ಕಿನ್ನಿಗೊಳಿ 43 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮಟಿ.ವಿ ಚಾನಲ್ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ಬಾಲಗಂಧಾರ ತಿಲಕರು ಗಣೇಶೋತ್ಸವವನ್ನು ಹುಟ್ಟು ಹಾಕಿ ಸಂಘಟಿಸಿದರು ಅದರ ಪರಂಪರೆ ಮುಂದೆಯೂ ಮುಂದುವರಿಯಲಿದೆ ಇದಕ್ಕೆ ಮೂಲ ಕಾರಣ ಜನರ ಧಾರ್ಮಿಕ ಆಚರಣೆಗಳು ಹಾಗೂ ಸಂಸ್ಕೃತಿ. ಎಂದು ಹೇಳಿದರು. ಈ ಸಂದರ್ಭ ಮೂರು ದಶಕಗಳ ಕಾಲದಿಂದ ಗಣಪತಿ ಮೂರ್ತಿ ರಚಿಸಿಕೊಂಡು ಬರುತ್ತಿದ್ದ ಚಿತ್ರ ಕಲಾವಿದ ಪದ್ಮನಾಭ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕಿ ಶಾಂಭವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ವಿಜಯ ಪ. ಪೂ. ಕಾಲೇಜು ಪ್ರಿನ್ಸಿಪಾಲ್ ಫಮೀದಾ ಬೇಗಂ, ಉದ್ಯಮಿ ರೋಕಿ ಪಿಂಟೋ, ಧನಂಜಯ ಶೆಟ್ಟಿಗಾರ್ ದುಬಾಯಿ, ಲೋಕಯ್ಯ ಸಾಲ್ಯಾನ್ ಕೊಂಡೇಲ, ಸಮಿತಿಯ ಅಧ್ಯಕ್ಷ ರಾಮಣ್ಣ ಕುಲಾಲ್, ಕಾರ್ಯದರ್ಶಿ ಯಶೋಧರ ಎಂ. ಶೆಟ್ಟಿ , ಸುಮಿತ್ ಕುಮಾರ್, ಕೆ. ಬಿ. ಸುರೇಶ್, ಭಾಸ್ಕರ ಶೆಣೈ. ಮತ್ತಿತರರು ಉಪಸ್ಥಿತರಿದ್ದರು.
ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ಪಿ. ಸತೀಶ್ ರಾವ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-31081704

Comments

comments

Comments are closed.

Read previous post:
Kinnigoli-31081703
ಕೆರೆಕಾಡು ಗಣಪತಿ ಧಾರ್ಮಿಕ ಸಭೆ

ಕಿನ್ನಿಗೋಳಿ: ಗಣೇಶ ಚರ್ತುರ್ಥಿ, ನವರಾತ್ರಿ, ದೀಪಾವಳಿ ಯಂತಹ ಆಚರಣೆಗಳು ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಬಿಂಬಿಸುವ, ಪ್ರಕೃತಿಯನ್ನು ಪೂಜಿಸುವ ಆರಾಧನಾ ಪದ್ಧತಿಯಾಗಿದ್ದು ನಮ್ಮ ಬದುಕು ಅದನ್ನು ಅವಲಂಬಿಸಿದೆ ಎಂದು ಹಿರಿಯ...

Close