ಅನುಷ್ಟಾನದಿಂದ ಬ್ರಾಹ್ಮಣ್ಯ ಉಳಿಸಿ

ಕಿನ್ನಿಗೋಳಿ: ಜಪಾನುಷ್ಟಾನದಿಂದ ಬ್ರಾಹ್ಮಣರು ಬ್ರಾಹ್ಮಣ್ಯದ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಸ್ವಾಭಿಮಾನದ ಬದುಕನ್ನು ಕಂಡುಕೊಂಡಿರುವ ಬ್ರಾಹ್ಮಣ ಸಮಾಜ ಇನ್ನಷ್ಟು ಸಾಧನೆಗಳಿಂದ ಬೆಳೆಯಬೇಕು ಎಂದು ಸುರಗಿರಿ ಮಹಾಲಿಂಗೇಶ್ವರ ದೇವಳದ ಅರ್ಚಕ ವಿಶ್ವೇಶ ಭಟ್ ಹೇಳಿದರು.
ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ದಂಪತಿ, ನಿವೃತ್ತ ಶಿಕ್ಷಕರಾದ ಬಾಬಣ್ಣ ಶಿಬರಾಯ ದಂಪತಿ, ಕಟೀಲು ರಮಾನಂದ ರಾವ್ ದಂಪತಿ ಹಾಗೂ ಆಶ್ವೀಜ ಉಡುಪ ಅವರನ್ನು ಸನ್ಮಾನಿಸಲಾಯಿತು.
ಸ್ಪರ್ಧಾ ವಿಜೇತರಿಗೆ ಬಹುಮಾನ, ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಟೀಲು ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ. ಶಶಿಕುಮಾರ್, ಕಾರ್ಯದರ್ಶಿ ವೇದವ್ಯಾಸ ಉಡುಪ, ಕೋಶಾಧಿಕಾರಿ ಲಕ್ಷ್ಮೀಪ್ರಸಾದ ಉಡುಪ ಉಪಸ್ಥಿತರಿದ್ದರು. ಅರುಣಾ ರಾವ್ ಸ್ವಾಗತಿಸಿದರು. ಸುಧಾ ಉಡುಪ ವಂದಿಸಿದರು. ಜ್ಯೋತಿ ಉಡುಪ, ಉಪಾಧ್ಯಕ್ಷ ಡಾ. ಪದ್ಮನಾಭ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-31081706

Comments

comments

Comments are closed.

Read previous post:
Kinnigoli-31081705
ಕಟೀಲು : ಉಪನ್ಯಾಸ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಗವತ ಸ್ಕಂದ ಮೂರರ ಕಥಾಮಾಲಿಕೆಯಲ್ಲಿ ಯಕ್ಷಗಾನ ಕಲಾವಿದ ದಿನಕರ ಗೋಖಲೆ ವ್ಯುತ್ಕ್ರ ವಧೆಯ ಬಗ್ಗೆ...

Close