ಬಿಲ್ಲವ ಸಮಾಜ ವಿಶೇಷ ಶೈಕ್ಷಣಿಕ ಶಿಭಿರ

ಮೂಲ್ಕಿ: ಸಮಯಪ್ರಜ್ಞೆ ಮತ್ತು ಸ್ವಾವಲಂಭಿ ಗುಣಗಳು ಯುವ ಸಮಾಜವನ್ನು ಅಭಿವೃದ್ಧಿಗೊಳಿಸಿ ಸಾಧಕರಾಗಲು ಸಹಕಾರ ನೀಡುತ್ತದೆ ಎಂದು ಮಂಗಳೂರು ಸೈಯಾದ್ರಿ ಕಾಲೇಜಿನ ಉಪನ್ಯಾಸಕ ಪದ್ಮನಾಭ ಬಂಗೇರ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ವಿಶೇಷ ಶೈಕ್ಷಣಿಕ ಶಿಭಿರದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ಬಳಸಿಕೊಂಡು ಪ್ರಾಪಂಜಿಕ ವಿದ್ಯಾಮಾನಗಳ ತಿಳುವಳಿಕೆಯೊಂದಿಗೆ ಜ್ಞಾನ ಸಂಪನ್ನರಾಗುವುದು ಮಾತ್ರವಲ್ಲದೆ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಸಂಸ್ಕೃತಿ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತಿ ಗಳಿಸಿಕೊಳ್ಳಬೇಕು ಮಾತ್ರವಲ್ಲದೆ ಪರೋಪಕಾರಿಗಳಾಗಿ ಸಮಾಜ ಮುಖಿಯಾಗಿ ಬದುಕಲು ಪ್ರಯತ್ನಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕಾಗಿ ಸಂಘದ ವತಿಯಿಂದ ವೀಶೇಷ ನಿಧಿಯನ್ನು ರಚಿಸಿ ಸಹಾಯ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಘದ ಸಹಾಯ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧಕರಾಗಿ ಬೆಳಗಿ ನೀವು ಮುಂದಿನ ದಿನಗಳಲ್ಲಿ ಶೈಕ್ಷಣಿಕ ಸಹಾಯ ನೀಡುವ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು. ಈ ಸಂದರ್ಭ ಉಪಾಧ್ಯಕ್ಷರಾದ ವಾಸು ಪೂಜಾರಿ. ರಮೇಶ್ ಕೊಕ್ಕರಕಲ್ . ಗೌ.ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು ಹಾಗೂ ಸಂಘದ ಪೂರ್ವಾಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು.

Kinnigoli-310817010

Comments

comments

Comments are closed.

Read previous post:
Kinnigoli-31081709
ಮಡಿವಾಳ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಮೂಲ್ಕಿ: ಬಹು ನಿರೀಕ್ಷಿತ ಮೂಲ್ಕಿಯ ಸಮಗ್ರ ಕುಡಿಯುವ ನೀರು ಯೋಜನೆಗೆ ಪೂರಕವಾಗಿ ನಬಾರ್ಡ್ ಯೋಜನೆಯಿಂದ ಸತತ ಪ್ರಯತ್ನದ ಫಲವಾಗಿ ಒಂದು ಕೋಟಿ ರೂ ಬಿಡುಗಡೆಗೊಂಡಿದ್ದು, ಸುಮಾರು ಒಂದೆಕರೆ ಪ್ರದೇಶದ...

Close