ಮೆನ್ನಬೆಟ್ಟು ಗ್ರಾಮ ಪಂಚಾಯತ್ ಜಮಾಬಂದಿ

ಕಿನ್ನಿಗೋಳಿ: ಗ್ರಾಮಸ್ಥರ ಸಹಕಾರ ಗ್ರಾಮದ ಅಭಿವೃದ್ಧಿಯಲ್ಲಿ ಅತೀ ಅಗತ್ಯ ಹಾಗೂ ಪಂಚಾಯಿತಿ ಆಡಳಿತ ಅದಕ್ಕೆ ಪೂರಕವಾಗಿರಬೇಕು ಎಂದು ನೋಡೆಲ್ ಅಧಿಕಾರಿ ಸುಂದರ್ ನಾಯ್ಕ್ ಹೇಳಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಜಮಾ ಬಂದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಅಧ್ಯಕ್ಷತೆ ವಹಿಸಿದ್ದರು.
ಇಂಜಿನಿಯರ್ ಪ್ರಶಾಂತ್ ಆಳ್ವ ಕಾಮಗಾರಿಗಳ ಬಗ್ಗೆ ವಿವರ ನೀಡಿ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ಸುಮಾರು 31 ಕಾಮಕಾರಿಗಳು ನಡೆದಿವೆ ಎಂದು ತಿಳಿಸಿದರು.
ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಬೇಬಿ, ಸುಶೀಲ, ಲಕ್ಷ್ಮೀ, ಶಾಲಿನಿ, ಮೀನಾಕ್ಷಿ , ತಾಲೂಕು ಇಂಜಿನಿಯರ್ ಇಲಾಖೆಯ ರಾಧೇಶ್ ತೋರ್ಕೆ, ಶಿವಣ್ಣಕವರ್ ಉಪಸ್ಥಿತರಿದ್ದರು.
ಪಂಚಾಯತ್ ಪಿಡಿಒ ರಮ್ಯಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-31081707

Comments

comments

Comments are closed.

Read previous post:
Kinnigoli-31081706
ಅನುಷ್ಟಾನದಿಂದ ಬ್ರಾಹ್ಮಣ್ಯ ಉಳಿಸಿ

ಕಿನ್ನಿಗೋಳಿ: ಜಪಾನುಷ್ಟಾನದಿಂದ ಬ್ರಾಹ್ಮಣರು ಬ್ರಾಹ್ಮಣ್ಯದ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಸ್ವಾಭಿಮಾನದ ಬದುಕನ್ನು ಕಂಡುಕೊಂಡಿರುವ ಬ್ರಾಹ್ಮಣ ಸಮಾಜ ಇನ್ನಷ್ಟು ಸಾಧನೆಗಳಿಂದ ಬೆಳೆಯಬೇಕು ಎಂದು ಸುರಗಿರಿ ಮಹಾಲಿಂಗೇಶ್ವರ ದೇವಳದ ಅರ್ಚಕ ವಿಶ್ವೇಶ ಭಟ್...

Close