ಅಮಲೋದ್ಭವಮಾತಾ ಚರ್ಚಿನಲ್ಲಿ ಕೆಥೋಲಿಕ್ ಸಭಾ

ಮೂಲ್ಕಿ: ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ನೀಡಿರುವ ಬಹಳಷ್ಟು ಯೋಜನೆಗಳ ಮಾಹಿತಿಯ ಅಲಭ್ಯತೆಯಿಂದ ಕೆಥೊಲಿಕ್ ಧರ್ಮೀಯರು ವಂಚಿತರಾಗುತ್ತಿದ್ದಾರೆ. ಎಂದು ಕೆಥೋಲಿಕ್ ಚರ್ಚು ವಾರ್ಡೋ ನಿರ್ದೇಶಕರಾದ ರೆ. ಫಾ.ಆಲ್ವಿನ್ ಡಿಕುನ್ಹಾ ಹೇಳಿದರು.
ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನಲ್ಲಿ ಕೆಥೋಲಿಕ್ ಸಭಾ ಮೂಲ್ಕಿ ಘಟಕದ ಆಸರೆಯಲ್ಲಿ ಕ್ರೈಸ್ತ ಧರ್ಮೀಯರಿಗಾಗಿ ಸರಕಾರಿ ಸೌಲಭ್ಯಗಳ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ಕೇಂದ್ರ(ಹೆಲ್ಪ್ ಡೆಸ್ಕ್) ಉದ್ಘಾಟಿಸಿ ಮಾತನಾಡಿದರು.
ಸರಕಾರದ ವತಿಯಿಂದ ಶೈಕ್ಷಣಿಕ, ಸಾಮಾಜಿಕ,ಆರ್ಥಿಕ ಹಾಗೂ ಸಾಂಸಾರಿಕ ನೆಲೆಯಲ್ಲಿ ಬಹಳಷ್ಟು ಸೌಲಭ್ಯಗಳು ನೀಡಲಾಗುತ್ತಿದ್ದು ಕ್ರೈಸ್ತರು ಈ ಬಗ್ಗೆ ಗಮನ ಹರಿಸಬೇಕಾಗಿದೆ ಈ ಬಗ್ಗೆ ಕೆಥೋಲಿಕ್ ಸಭಾ ಮೂಲ್ಕಿ ಘಟಕದ ಕಾರ್ಯ ಅಭಿನಂದನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ಧರ್ಮಗುರುಗಳಾದ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ಮಾತನಾಡಿ, ಸರಕಾರ ಅಲ್ಪ ಸಂಖ್ಯಾತರಿಗಾಗಿ ಬಹಳಷ್ಟು ಸೌಲಭ್ಯಗಳನ್ನು ನೀಡಿದರೂ ಕ್ರೈಸ್ತರು ಪಡೆದುಕೊಳ್ಳುವ ಆಸಕ್ತಿ ತೋರಿಸದ ಕಾರಣ ಬಹಳಷ್ಟು ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ ಮುಂದಿನ ದಿನಗಳಲ್ಲಿ ಕೆಥೋಲಿಕ್ ಕ್ರೈಸ್ತರು ಈ ಹೆಲ್ಪ್ ಸಹಕಾರ ಪಡೆದು ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭ ರಚನಾ ಸಂಸ್ಥೆಯ ನಿರ್ದೇಶಕ ಕಿರಣ್ ಸಂಪನ್ಮೂಲವ್ಯಕ್ತಿಯಾಗಿ ಮಾಹಿತಿ ನೀಡಿದರು.
ಈ ಸಂದರ್ಭ ಅತಿಥಿಗಳಾಗಿ ಕೆಥೊಲಿಕ್ ಸಭಾ ಮೂಲ್ಕಿ ಘಟಕದ ಅಧ್ಯಕ್ಷ ರೋಲ್ಫಿ ಡಿಕೋಸ್ಟಾ, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷೆ ಜೀನ್ ಮೋಲಿ ಡಿಸೋಜಾ, ಕಾರ್ಯದರ್ಶಿ ಪ್ರಕಾಶ್ ಮೊಂತೇರೊ, ನೆಡಲಿನ್ ಕೋನ್ವೆಂಟ್ ಸುಪೀರಿಯರ್ ಸಿ.ನಂದಿತಾ,ಕೆಥೊಲಿಕ್ ಸಭಾ ಮೂಲ್ಕಿ ಘಟಕದ ಪೂರ್ವಾಧ್ಯಕ್ಷ ಜೋನ್ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ರೈಮಂಡ್ ರೆಬೆಲ್ಲೊ, ಕೋಶಾಧಿಕಾರಿ ಗೋಡ್ವಿನ್ ಎಮಿಲ್ಢಾ ಕ್ರಾಸ್ತಾ ಉಪಸ್ಥಿತರಿದ್ದರು.
ರೋಲ್ಫಿ ಡಿಕೋಸ್ಟಾ ಸ್ವಾಗತಿಸಿ ನಿರೂಪಿಸಿದರು.

Kinnigoli-310817012

Comments

comments

Comments are closed.

Read previous post:
Kinnigoli-310817011
ಕೊಳಚಿಕಂಬಳ ಶ್ರಿ ಜಾರಂದಾಯ ಚೌತಿ ಪೂಜೆ

ಮೂಲ್ಕಿ:ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಮೂಲ್ಕಿಯ ಕೊಳಚಿಕಂಬಳ ಶ್ರೀ ಜಾರಂದಾಯ ದ್ಯೆವಸ್ತಾನದಲ್ಲಿ ನಡೆದ ಚೌತಿ ಪೂಜೆ ಸಂದರ್ಭದಲ್ಲಿ ಶ್ರೀ ಜಾರಂದಾಯ ಮತ್ತು ಶ್ರೀ ಧೂಮಾವತಿ...

Close