ಮಡಿವಾಳ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಮೂಲ್ಕಿ: ಬಹು ನಿರೀಕ್ಷಿತ ಮೂಲ್ಕಿಯ ಸಮಗ್ರ ಕುಡಿಯುವ ನೀರು ಯೋಜನೆಗೆ ಪೂರಕವಾಗಿ ನಬಾರ್ಡ್ ಯೋಜನೆಯಿಂದ ಸತತ ಪ್ರಯತ್ನದ ಫಲವಾಗಿ ಒಂದು ಕೋಟಿ ರೂ ಬಿಡುಗಡೆಗೊಂಡಿದ್ದು, ಸುಮಾರು ಒಂದೆಕರೆ ಪ್ರದೇಶದ ಮಡಿವಾಳ ಕೆರೆಯ 6 ಫೀಟ್ ಹೂಳೆತ್ತುವಿಕೆ ಮತ್ತು ಸುತ್ತ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಮಡಿವಾಳ ಕೆರೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯಿಂದ ಬಿಡುಗಡೆಯಾದ ಒಂದು ಕೋಟಿ ರೂ ವೆಚ್ಚದ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಸುಮಾರು 4ಕೋಟಿ ರೂ ವೆಚ್ಚದಲ್ಲಿ ತುಂಬೆಯಿಂದ ಮೂಲಕ್ಕಿ ನಗರಕ್ಕೆ ನೀರು ತರುವ ಪೈಪ್ ಲೈನ್ ಹೆದ್ದಾರಿ ವಿಸ್ತರಣೆಯ ಸಂದರ್ಭ ಸಮಸ್ಯೆಗೆ ಒಳಗಾಗಿದ್ದು ಮೂಲ್ಕಿಯ ಕೆ.ಎಸ್.ರಾವ್ ನಗರದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಸಂಭವಿಸಿದನ್ನು ನೆನಪಿಸಿದ ಶಾಸಕರದೀ ಯೋಜನೆಯಿಂದ ಮೂಲಕ್ಕಿಯ ನೀರಿನ ಸಮಸ್ಯೆ ಹಗುರವಾಗಲಿದೆ. ಮೂಲ್ಕಿ ನಗರಕ್ಕೆ ದಿನದ ೨೪ ತಾಸು ನೀರುಣಿಸುವ ಮಹತ್ವಾಕಾಂಕ್ಷೆಯ 14 ಕೋಟಿ ರೂ.ವೆಚ್ಚದ ಶುದ್ಧ ಕುಡಿಯುವ ನೀರು ಯೋಜನೆಯ ಟೆಂಡರ್ ಅಂತಿಮ ಹಂತದಲ್ಲಿದ್ದು,ಆದಷ್ಟು ಶೀಘ್ರ ಜಾರಿಯಾಗಲಿದೆ. ಬಳಿಕ ನಗರದ ಅತೀ ದೊಡ್ಡ ಸಮಸ್ಯೆಯಾದ ಒಳಚರಂಡಿ ಯೋಜನೆ ಶೀಘ್ರ ಮಂಜೂರಾತಿಗೊಳ್ಳಲಿದೆ ಎಂದವರು ಹೇಳಿದರು.
ನಪಂ ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಮೂಲ್ಕಿಯ ಸಮಗ್ರ ಅಭಿವೃದ್ಧಿಗೆ ಶಾಸಕ ಅಭಯಚಂದ್ರ ಜೈನ್ ಕೊಡುಗೆ ಅಪಾರವಾಗಿದ್ದು ಕೆರೆ ಅಭಿವೃದ್ಧಿಗೆ ಶಾಸಕರ ಸತತ ಪ್ರಯತ್ನದಿಂದ ಅನುದಾನ ಬಿಡುಗಡೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಧಾರವಾಡ ನಿಂದರಕಿ ಚೆನ್ನಮಲ್ಲಿಕಾರ್ಜುನ ಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚಿಸಿದರು.
ಎಪಿಎಮ್‌ಸಿ ಅಧ್ಯಕ್ಷ ಪ್ರಮೋದ್ ಕುಮಾರ್,ಸದಸ್ಯ ಜೋಯಲ್ ಹೆರಾಲ್ಡ್ ಡಿಸೋಜಾ, ಮೂಡಾ ಸದಸ್ಯ ವಸಂತ ಬೆರ್ನಾರ್ಡ್,ನಪಂ ಸದಸ್ಯರುಗಳಾದ ಪುತ್ತುಬಾವ,ಹಸನ್ ಬಶೀರ್ ಕುಳಾಯಿ,ಯೋಗೀಶ್ ಕೋಟ್ಯಾನ್, ವಿಮಲಾ ಪೂಜಾರಿ, ಅಶೋಕ್ ಪೂಜಾರ್,ಶೈಲೇಶ್ ಕುಮಾರ್, ಉಮೇಶ್ ಮಾನಂಪಾಡಿ,ಮೀನಾಕ್ಷಿ ಬಂಗೇರ,ಮುಖ್ಯಾಧಿಕಾರಿ ಇಂದು ಎಮ್.,ಗುತ್ತಿಗೆದಾರ ಕೆ.ಸಿ.ಕಾಮತ್,ಮಂಜುನಾಥ ಕಂಬಾರ್, ಹಕೀಂ ಮೊಹಮ್ಮದ್,ಬಾಲಾದಿತ್ಯ ಆಳ್ವ, ಲೋಕೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ನಪಂ ಸದಸ್ಯ ಆಸಿಫ್ ಬಿಎಮ್ ಕಾರ್ಯಕ್ರಮ ನಿರ್ವಹಿಸಿದರು.

Kinnigoli-31081709

Comments

comments

Comments are closed.

Read previous post:
Kinnigoli-31081708
ಪುನರೂರು ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಪಾಠ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಸಹಕಾರಿ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪೂರಕವಾಗಲಿ ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು. ಪುನರೂರು ಭಾರತಮಾತ...

Close