ಅರಿವು, ಹೂಡಿಕೆದಾರರ ತರಬೇತು ಕಾರ್ಯಕ್ರಮ

ಮೂಲ್ಕಿ: ಶೇರು ಮರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಸರ್ವಾಂಗೀಣ ಅಧ್ಯಯನ ನಡೆಸಿದಲ್ಲಿ ಉತ್ತಮ ಲಾಭ ನಿಶ್ಚಿತವಿದ್ದು ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಎಂದು ಲೋಟಸ್ ನೋವೆಲ್ತ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವೇಣುಗೋಪಾಲ ರಾಯಿರಥ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಮತ್ತು ಮುಂಬೈ ಶೇರು ಮಾರುಕಟ್ಟೆ ಸಂಯುಕ್ತ ಆಶ್ರಯದಲ್ಲಿ ಲೋಟಸ್ ನೋವೆಲ್ತ್ ಸಂಸ್ಥೆಯ ವತಿಯಿಂದ ಮಾರುಕಟ್ಟೆ ವಿದ್ಯಮಾನಗಳ ಅರಿವು ಹಾಗೂ ಹೂಡಿಕೆದಾರರ ತರಬೇತು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬೌಗೋಳಿಕ,ಪ್ರಕೃತಿ,ರಾಜಕೀಯ ವಿತ್ತ ವಿದ್ಯಮಾನಗಳು ಹಾಗೂ ದೈನಂದಿನ ಬದಲಾವಣೆಗಳ ಅರಿವು ಬೆಳೆಸಿಕೊಂಡಲ್ಲಿಉತ್ತಮ ಹೂಡಿಕೆದಾರರಾಗಬಹುದು ಅಥವಾ ಉತ್ತಮ ಸಲಹೇದಾರರಾಗಿ ವ್ಯವಹಾರ ನಡೆಸಲು ಸಾಧ್ಯವಿದ್ದು ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸುವುದು ಬಹಳ ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಉಪಸ್ಥಿತರಿದ್ದರು. ಉಪನ್ಯಾಸಕಿ ಜಯಶ್ರೀ ನಿರೂಪಿಸಿದರು.

Kinnigoli-310817014

Comments

comments

Comments are closed.

Read previous post:
Kinnigoli-310817013
ಕಾವ್ಯಾಳ ಮನೆಗೆ ಮಧು ಬಂಗಾರಪ್ಪ ಭೇಟಿ

ಮೂಲ್ಕಿ: ದುರಂತ ಸಾವಿಗೀಡಾದ ವಿದ್ಯಾರ್ಥಿನಿ ಕಾವ್ಯಾಳ ಕಟೀಲು ದೇವರಗುಡ್ಡೆಯಲ್ಲಿರುವ ಮನೆಗೆ ಮಧು ಬಂಗಾರಪ್ಪ ಭೇಟಿ ನೀಡಿ ಕಾವ್ಯಾ ರವರ ಹೆತ್ತವರನ್ನು ಸಂತೈಸಿದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರವರು ಬಡವರ ಮತ್ತು...

Close