ಶ್ರೀ ರಾಮ ವಿದ್ಯಾಕೇಂದ್ರದಕ್ಕೆ ಅಕ್ಕಿ ಸಮರ್ಪಿತ

ಮೂಲ್ಕಿ: ರಾಜ್ಯ ಸರಕಾರದ ಹಿಂದು ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಮೂಲ್ಕಿ ಅತಿಕಾರಿ ಬೆಟ್ಟು ಸಮಿತಿ ವತಿಯಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಮಧ್ಯಾಹ್ನದ ಭೋಜನಕ್ಕೆ 11 ಕ್ವಿಂಟಾಲ್ ಅಕ್ಕಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ,ಉದ್ಯಮಿ ದುರ್ಗೆಶ್ ಶೆಟ್ಟಿ ಪಂಜ, ಅತಿಕಾರಿಬೆಟ್ಟು ಬಿ.ಜೆ.ಪಿ ಸ್ಥಾನೀಯ ಸಮಿತಿಯ ಕಾರ್ಯದರ್ಶಿ ತಾರನಾಥ ದೇವಾಡಿಗ, ಹೇಮನಾಥ್ ಶೆಟ್ಟಿಗಾರ್, ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಕಿನ್ನಿಗೋಳಿ ಬಿ.ಜೆ.ಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಭಗತ್ ಸಿಂಗ್ ಯುವಕ ವೃಂದ ಅಂಗರಗುಡ್ಡೆ ಇದರ ಅಧ್ಯಕ್ಷ ಉಮೇಶ್ ಆರ್ ಆಚಾರ್ಯ ಉಪಸ್ಥಿತರಿದ್ದರು.

Kinnigoli-310817015

Comments

comments

Comments are closed.