ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಅಕ್ಕಿ ಸರ್ಮಪಣೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ದ್ವಂದ್ವ ರೀತಿಯ ದೋರಣೆಯಿಂದಾಗಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಶಾಲೆಯ ಬಡ ವಿದ್ಯಾರ್ಥಿಗಳ ಅನ್ನ ಕಸಿಯುವಂತಹ ದ್ವೇಷದ ರಾಜಕಾರಣ ಸಲ್ಲದು ಎಂದು ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು ಹೇಳಿದರು.
ಭಾನುವಾರ ಅಂಗರಗುಡ್ಡೆ ಶ್ರೀ ರಾಮಮಂದಿರದ ವಠಾರದಲ್ಲಿ ಬಿಜೆಪಿ ಅತಿಕಾರಿಬೆಟ್ಟು ಸ್ಥಾನಿಯ ಸಮಿತಿಯ ಸಹಕಾರದಿಂದ ಕೃಷ್ಣ ಶೆಟ್ಟಿಗಾರ್ ಅವರ ಮುಂದಾಳುತ್ವದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ೧೦ ಕಿಂಟ್ವಾಲ್ ಅಕ್ಕಿಯನ್ನು ಸಮರ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯೆಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ಮಂಗಳೂರು ತಾ. ಪಂ. ಸದಸ್ಯ ಶರತ್ ಕುಬೆವೂರು, ಮಂಡಲದ ಕಾರ್ಯದರ್ಶಿ ಜಯಾನಂದ ಮೂಲ್ಕಿ, ಗ್ರಾ. ಪಂ. ಸದಸ್ಯ ಜೀವನ್ ಶೆಟ್ಟಿ , ಶಕ್ತಿಕೇಂದ್ರದ ಸಂತೋಷ್ ಶೆಟ್ಟಿ , ಉದಯ ಅಮೀನ್ ಮಟ್ಟು , ಮಧು ಕುಬೆವೂರು, ಹರಿಕೃಷ್ಣದಾಸ್, ಸತೀಶ್ ಆಚಾರ್ಯ, ಬಿಜೆಪಿ ಸ್ಥಾನೀಯ ಸಮಿತಿಯ ಕಾರ್ಯದರ್ಶಿ ತಾರಾನಾಥ ದೇವಾಡಿಗ, ಕೃಷ್ಣ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಆರ್. ಎಸ್. ಎಸ್ ಮುಂಬಯಿ ಕಾರ್ಯಕರ್ತರಾದ ಜಿ. ಕೆ. ಕೆಂಚನಕೆರೆ, ಪ್ರವೀಣ್ ಆರ್ ಶೆಟ್ಟಿ , ಗಣೇಶ್ ಶೆಟ್ಟಿಗಾರ್, ಜಯ ಎಮ್ ಶೆಟ್ಟಿ , ಸ್ಥಳೀಯ ಉದ್ಯಮಿ ದುರ್ಗೆಶ್ ಶೆಟ್ಟಿ , ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ ಪುರಂದರ ಶೆಟ್ಟಿಗಾರ್ ಅಂಗರಗುಡ್ಡೆ ಭಗತ್ ಸಿಂಗ್ ಸಂಘಟನೆಯ ಸದಸ್ಯರು ಸಹಕಾರ ನೀಡಿದ್ದರು.

Kinnigoli-31081701

Comments

comments

Comments are closed.

Read previous post:
Kinnigoli-29082017016
ಕಿನ್ನಿಗೋಳಿ ವಿಸರ್ಜನಾ ಮೆರವಣಿಗೆ

ಕಿನ್ನಿಗೋಳಿ: ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ.

Close