ನೂತನ ಕಛೇರಿ ಉದ್ಘಾಟನೆ

ಮೂಲ್ಕಿ: ಕರ್ನಾಟಕ ರಾಜ್ಯ ಸರಕಾರದಿಂದ ದ.ಕ ಜಿಲ್ಲಾ ಕ್ರೈಸ್ತ ವಿವಾಹ ನೊಂದಣಾಧಿಕಾರಿಯಾಗಿರುವ ನೋಟರಿ ವಕೀಲ ಡೇನಿಯಲ್ ದೇವರಾಜ್ ರವರ ನೂತನ ಕಛೇರಿಯ ಮೂಲಕ ಗ್ರಾಮೀಣ ಬಡ ವರ್ಗದ ಜನರ ಆಶೋತ್ತರಗಳಿಗೆ ಸಹಕಾರಿಯಾಗಲಿ ಎಂದು ಮೂಲ್ಕಿ ಯುನಿಟಿ ಚರ್ಚಿನ ಸಭಾಪಾಲಕರಾದ ಎಡ್ವರ್ಡ್ ಕರ್ಕಡ ಹೇಳಿದರು. ಕಿನ್ನಿಗೋಳಿ ಸ್ವಾಗತ್ ಸಂಕೀರ್ಣದಲ್ಲಿ ಶುಕ್ರವಾರ ನೂತನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭ ಐಕಳ ಪೋಂಪೈ ಪದವಿ ಕಾಲೇಜು ಪ್ರಾಂಶುಪಾಲ ಡಾ. ಕ್ಲಾರೆನ್ಸ್ ಮಿರಾಂದಾ, ಪದ್ಮನೂರು ಕಾರ್ಪೋರೇಶನ್ ಬ್ಯಾಂಕ್ ಪ್ರಭಂದಕ ಪ್ರವೀಣ್ ಉಳ್ಳಲ್, ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಪ್ರಭಂದಕರಾದ ಇಶಾನಿ ಚಟರ್ಜಿ, ಕೆನರಾ ಬ್ಯಾಂಕ್ ಪ್ರಭಂದಕ ಸುಕುಮಾರ್ ರಾವ್,ವಿಜಯಾ ಬ್ಯಾಂಕ್ ಪ್ರಭಂದಕ ರೋಷನ್ ಪ್ರೀತಮ್ ಕ್ಯಾಸ್ಟಲಿನೊ, ಮೆನ್ನಬೆಟ್ಟು ಎಸ್.ಬಿ.ಈ ಬ್ಯಾಂಕ್ ಪ್ರಭಂದಕ ಭಾಸ್ಕರ ಕಿಣಿ, ತಾಳಿಪಾಡಿ ಲಲಿತಾ ಕೆ.ಶೆಟ್ಟಿ ವಕೀಲರಾದ ವಿಲ್ಮಾ ಡಯಾನಾ ಡಿಸೋಜ ಮತ್ತು ಪ್ರತಿಭಾ ಉಪಸ್ಥಿತರಿದ್ದರು.

ವಕೀಲ ಡೇನಿಯಲ್ ದೇವರಾಜ್ ಸ್ವಾಗತಿಸಿದರು. ವಿಲ್ಮಾ ಡಯಾನಾ ಡಿಸೋಜಾ ನಿರೂಪಿಸಿದರು.

Mulki-0109201701

Comments

comments

Comments are closed.

Read previous post:
Kinnigoli-310817016
ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆ

ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆಯಲೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ...

Close