ವನ ಮಹೋತ್ಸವ ಕಾರ್ಯಕ್ರಮ

ಮೂಲ್ಕಿ: ಜಯ ಕರ್ನಾಟಕ ಮೂಲ್ಕಿ ಘಟಕದ ವತಿಯಿಂದ ಮೂಲ್ಕಿ ಸಿಎಸ್‌ಐ ಬಾಲಿಕಾಶ್ರಮದ ಆವರಣದಲ್ಲಿ ವನ ಮಹೋತ್ಸವ ಆಚರಿಸಲಾಯಿತು.
ಮೂಲ್ಕಿ ಸಿಎಸ್‌ಐ ಯುನಿಟಿ ಚರ್ಚು ಸಭಾ ಪಾಲಕರಾದ ರೆ.ಎಡ್ವರ್ಡ್ ಕರ್ಕಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಂಘಟನೆಗಳಿಗೆ ಪರಿಸರ ರಕ್ಷಣೆಯ ಖಾಳಜಿ ಮೂಡಿದರೆ ಪರಿಣಾಮಕಾರಿಯಾಗಿ ಪ್ರಾದೇಶಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಮೂಲ್ಕಿ ಕಾರ್ನಾಡು ಸಿ.ಎಸ್.ಐ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್ ಮಾತನಾಡಿ, ಯುವ ಜನರಿಂದ ಕೂಡಿದ ಜಯ ಕರ್ನಾಟಕ ಸಂಸ್ಥೆಯು ವನ ಮಹೋತ್ಸವ ಸಹಿತ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಿ ಗ್ರಾಮೀಣ ಅರ್ಹ ಪಳಾನುಭವಿಗಳಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಜಯ ಕರ್ನಾಟಕ ಮೂಲ್ಕಿ ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್,ಗೌರವಾಧ್ಯಕ್ಷ ಆದಿಲ್ ಇಸ್ಮಾಯಿಲ್, ಕಾರ್ಯದರ್ಶಿ ದೇವದಾಸ್ ಶೆಟ್ಟಿಗಾರ್,ಉದ್ಯಮಿ ಪ್ರವೀಣ್ ಆನಂದ, ರಾಜೇಶ್ ಘಜನಿ, ದಿನೇಶ್ ಶೆಟ್ಟಿ, ರಮೇಶ್ ಚಿತ್ರಾಪು, ದಿನೇಶ್, ಸತೀಶ್ ಚಿತ್ರಾಪು, ಸುನಿಲ್,ಸರ್ಪ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.

Mulki-0109201702

Comments

comments

Comments are closed.

Read previous post:
Mulki-0109201701
ನೂತನ ಕಛೇರಿ ಉದ್ಘಾಟನೆ

ಮೂಲ್ಕಿ: ಕರ್ನಾಟಕ ರಾಜ್ಯ ಸರಕಾರದಿಂದ ದ.ಕ ಜಿಲ್ಲಾ ಕ್ರೈಸ್ತ ವಿವಾಹ ನೊಂದಣಾಧಿಕಾರಿಯಾಗಿರುವ ನೋಟರಿ ವಕೀಲ ಡೇನಿಯಲ್ ದೇವರಾಜ್ ರವರ ನೂತನ ಕಛೇರಿಯ ಮೂಲಕ ಗ್ರಾಮೀಣ ಬಡ ವರ್ಗದ ಜನರ...

Close