ಸಾಮೂಹಿಕ ಸಂಘಟನೆಗೆ ಗಣೇಶೋತ್ಸವ ಪ್ರೇರಣೆ

ಸಸಿಹಿತ್ಲು: ಸಾರ್ವಜನಿಕ ಗಣೇಶೋತ್ಸವವು ಸಾಮೂಹಿಕವಾಗಿ ಸಂಘಟನೆಗೆ ಪ್ರೇರಣೆ ನೀಡುತ್ತದೆ. ಗ್ರಾಮದಲ್ಲಿ ಧಾರ್ಮಿಕ ನಂಬಿಕೆಗಳನ್ನು ಜಾಗೃತಿಗೊಳಿಸಲು ಇಂತಹ ಆಚರಣೆಯಲ್ಲಿ ಮುಕ್ತವಾಗಿ ಭಾಗವಹಿಸಬೇಕು ಎಂದು ಸಾಮಾಜಿಕ ಮುಂದಾಳು ಉದಯ ಬಿ. ಸುವರ್ಣ ಸಸಿಹಿತ್ಲು ಹೇಳಿದರು.
ಸಸಿಹಿತ್ಲುವಿನ ಶ್ರೀ ನಾಗಬ್ರಹ್ಮ ರಕ್ತೇಶ್ವರೀ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ಆಶ್ರಯದಲ್ಲಿ 38ನೇ ವರ್ಷ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಿತಿಯ ಅಧ್ಯಕ್ಷ ಶಂಕರ ವಿ. ಬಂಗೇರ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಗಣೇಶೋತ್ಸವದ ಗೌರವ ಸಲಹೆಗಾರ ಶ್ರೀನಿವಾಸ ರಾವ್ ಮೈಸೂರು, ಸಂಚಾಲಕ ಎಸ್.ಜಿ.ನಾರಾಯಣ ರಾವ್ ಮತ್ತು ಅಧ್ಯಕ್ಷ ಶಂಕರ ವಿ. ಬಂಗೇರರನ್ನು ಸಮಿತಿಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ವಿಶೇಷವಾಗಿ ಸಮ್ಮಾನಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾದ ಪ್ರೇಮನಾಥ ಸುವರ್ಣ ಮುಂಬೈ, ನಾರಾಯಣ ಕರ್ಕೇರ ಸಸಿಹಿತ್ಲು, ಉಪಾಧ್ಯಕ್ಷ ಗಣೇಶ್ ಅಮೀನ್, ರಮೇಶ್ ಸನಿಲ್, ಕಾರ್ಯದರ್ಶಿ ಅನಿಲ್ ಪೂಜಾರಿ, ಕೋಶಾಧಿಕಾರಿ ಅನಿಲ್ ಶೆಟ್ಟಿಗಾರ್, ಸಹ ಕಾರ್ಯದರ್ಶಿ ಚಂದ್ರಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಮುಖೇಶ್ ಕರ್ಕೇರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ನಾರಾಯಣ ಕರ್ಕೇರ ನಿರೂಪಿಸಿದರು.

Mulki-0209201702

Comments

comments

Comments are closed.

Read previous post:
Mulki-0209201701
ಸತತ ಪ್ರಯತ್ನಗಳಿಗೆ ಫಲ ಖಂಡಿತ

ಸಸಿಹಿತ್ಲು: ಶೈಕ್ಷಣಿಕ ಜೀವನದಲ್ಲಿ ಸತತವಾಗಿ ಪ್ರಯತ್ನ ನಡೆಸಿದಲ್ಲಿ ಸೂಕ್ತ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ನಾವು ನಿರೀಕ್ಷಿಸಬಹುದು. ಜೀವನದಲ್ಲಿಯೂ ಸಹ ಇದೇ ನಮಗೆ ಪಾಠ ಎಂದು ಮಂಗಳೂರು ವಿಶ್ವವಿದ್ಯಾಲಯದ...

Close