ಸತತ ಪ್ರಯತ್ನಗಳಿಗೆ ಫಲ ಖಂಡಿತ

ಸಸಿಹಿತ್ಲು: ಶೈಕ್ಷಣಿಕ ಜೀವನದಲ್ಲಿ ಸತತವಾಗಿ ಪ್ರಯತ್ನ ನಡೆಸಿದಲ್ಲಿ ಸೂಕ್ತ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ನಾವು ನಿರೀಕ್ಷಿಸಬಹುದು. ಜೀವನದಲ್ಲಿಯೂ ಸಹ ಇದೇ ನಮಗೆ ಪಾಠ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೋ. ಎ.ಎಂ.ಖಾನ್ ಹೇಳಿದರು.
ಸಸಿಹಿತ್ಲುವಿನ ಶ್ರೀ ಆಂಜನೇಯ ಸಭಾ ಭವನದಲ್ಲಿ ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ
ಸಸಿಹಿತ್ಲು ಮತ್ತು ಮುಂಬಯಿ ಸಮಿತಿ ಸಂಯುಕ್ತ ಆಶ್ರದಯಲ್ಲಿ ನಡೆದ ವಿದಾರ್ಥಿ ವೇತನ ಮತ್ತು ದತ್ತು ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಂಬಯಿ ಸಮಿತಿಯ ಆಧ್ಯಕ್ಷ ವಿಜಯ ಎಸ್. ತಿಂಗಳಾಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದಭ೯ದಲ್ಲಿ ೬೦ ಸಾವಿರ ರೂ. ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ದಿ| ಕೊರಗಪ್ಪ ದೇಜಮ್ಮ ಗುರಿಕಾರ ಇವರ ಸ್ಮರಣಾರ್ಥ ಪುತ್ರ ದಿಲೀಪ್ ಶ್ರೀಯಾನ್ ಮತ್ತು ಫುಡ್ಸ್ ಮುಕ್ಕ ಸಂಸ್ಥೆಯ ಸಹಕಾರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ದತ್ತು ಸ್ವೀಕರಿಸಲಾಯಿತು.
ಸಂನ್ಮೂಲ ವ್ಯಕ್ತಿಯಾಗಿ ರಘುಪತಿ ಭಟ್ ಸಸಿಹಿತ್ಲು ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಶ್ರೀಕರ ಪ್ರಭು, ಮುಂಬಯಿ ಸಮಿತಿಯ ಸಂಚಾಲಕ ಅನಿಲ್ ಕುಮಾರ್ ಸಸಿಹಿತ್ಲು, ಉಪಾಧ್ಯಕ್ಷ ಪ್ರೇಮನಾಥ ಸುವರ್ಣ, ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್ ಕುಮಾರ್ ಸಸಿಹಿತ್ಲು ಉಪಸ್ಥಿತರಿದ್ದರು.
ಯತೀಶ್ ಸಸಿಹಿತ್ಲು ಸ್ವಾಗತಿಸಿ, ನಿರೂಪಿಸಿದರು.

Mulki-0209201701

Comments

comments

Comments are closed.

Read previous post:
Mulki-0109201704
ಕೋಟೆಕೇರಿ ಗಣಪತಿ ವಿಗ್ರಹ

ಮೂಲ್ಕಿ: ಮೂಲ್ಕಿ ಕೋಟೆಕೇರಿ ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ನಡೆದ ಗಣೇಶೋತ್ಸವದ ಗಣಪತಿ ವಿಗ್ರಹವನ್ನು ಬಹಳ ವಿಜ್ರಂಭಣೆಯಿಂದ ಮೂಲ್ಕಿ ಶಾಂಭವಿ ನದಿಯಲ್ಲಿ ಜಲಾಧಿವಾಸಗೊಳಿಸಲಾಯಿತು.

Close