ಬಿಜೆಪಿ ಯುವ ಮೋರ್ಛಾ ಪ್ರತಿಭಟನೆ

ಮೂಲ್ಕಿ: ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕೀಯದ ದುಶ್ಪರಿಣಾಮವಾಗಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆಯ ಹಿಂದೆ ನೇರ ಭಾಗಿಗಳಾಗಿರುವ ಪಿಎಫ್‌ಐ,ಕೆಎಫ್‌ಡಿ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿವಂತೆ ಆಗ್ರಹಿಸಿ ಮೂಲ್ಕಿ ಬಿಜೆಪಿ ಯುವ ಮೋರ್ಛಾ ವತಿಯಿಂದ ಸೋಮವಾರ ಮೂಲ್ಕಿಯ ಬಸ್‌ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.
ಭಯೋತ್ಪಾದನೆಯ ಮೂಲಕ ದೇಶದ ಶಾಂತಿಯನ್ನು ಕಸಿದುಕೊಳ್ಳುವ ಮೂಲಭೂತ ವಾದಿಗಳು ಕೇರಳದಲ್ಲಿ ಸಕ್ರೀಯರಾಗಿದ್ದು ಇದೀಗ ಅವರ ವ್ಯಾಪ್ತಿಯನ್ನು ಕರ್ನಾಟಕದತ್ತ ಚಾಚಿದ್ದಾರೆ ಸೋಲುವ ಭೀತಿಯನ್ನು ಕಂಡುಕೊಂಡಿರುವ ಕಾಂಗ್ರೆಸ್ ಸರಕಾರ ಅವರಿಗೆ ಹಿಂಬಾಗಿಲ ಬೆಂಬಲ ನೀಡುತ್ತಿರುವುದು ಸರಕಾರವು ಹಿಂದೂ ಹತ್ಯೆಯ ಹಿಂದೆ ಇರುವ ಕೆಲವು ಸಂಘಟನೆಗಳನ್ನು ನಿಷೇಸಲು ಹಿಂದೆ ಸರಿಯುತ್ತಿದೆ.ನಾಲಾಯಕ್ ಸಚಿವರಾದ ರಮಾನಾಥ್ ರೈಯವರು ಈ ಸಂಘಟನೆಗಳಿಗೆ ಸಹಾಯ ಮಾಡುವ ಮೂಲಕ ಓಟ್ ಬ್ಯಾಂಕ್ ನಿರ್ಮಾಣಕ್ಕೆ ಹೊರಟಿದ್ದಾರೆ.ಈ ಮೂಲಕ ಜಿಲ್ಲೆಯನ್ನು ಕಾಶ್ಮೀರ ಮತ್ತು ಕೇರಳ ಮಾಡಹೊರಟಿದ್ದಾರೆ.ಅದಕ್ಕೆ ನಾವು ಅವಕಾಶ ನೀಡಲಾರೆವು.ಈ ಕಾರಣಗಳಿಂದಾಗಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಕಾರ್ಯಕ್ರಮಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂ ಹತ್ಯೆ ಹಾಗೂ ಹಲ್ಲೆಗಳಲ್ಲಿ ನೇರ ಭಾಗಿಯಾಗಿ ಭೀತಿಯ ವಾತಾವರಣ ಸೃಷ್ಟಿಸಿರುವ ಪಿಎಫ್‌ಐ,ಕೆಎಫ್‌ಡಿ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ತಕ್ಷಣ ನಿಷೇಸಬೇಕು.ಈ ಬಗ್ಗೆ ಮೂಲ್ಕಿ ವ್ಯಾಪ್ತಿಯ 31 ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿ ಸಂಭಂದಿತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಮೂಲ್ಕಿ ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಹೇಳಿದರು.
ಇದೇ ವೇಳೆ ಮೂಲ್ಕಿ ನಪಂ ಮುಖ್ಯಾಕಾರಿ ಮೂಲಕ ರಾಜ್ಯಪಾಲರಿಗೆ ಮನವಿಯೊಂದನ್ನು ಅರ್ಪಿಸಲಾಯಿತು.
ಪ್ರತಿಭಟನೆಯಲ್ಲಿ ಯುವ ಮೋರ್ಛಾ ಕಾರ್ಯದರ್ಶಿ ಹರಿಕೃಷ್ಣ,ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯೇಂದ್ರ ಶೆಣೈ,ಮೂಲ್ಕಿ ನಪಂ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಸದಸ್ಯರಾದ ಶೈಲೇಶ್ ಕುಮಾರ್,ಮೀನಾಕ್ಷಿ ಬಂಗೇರ ಮತ್ತು ಪುರುಷೋತ್ತಮ ರಾವ್,ಬಿಜೆಪಿ ಮುಖಂಡರಾದ ಅಬ್ದುಲ್ ರಜಾಕ್,ನರಸಿಂಹ ಪೂಜಾರಿ ಕೊಯ್ಯಾರು,ಅಶೋಕ್ ಜನನಿ,ವಿಠಲ ಎನ್. ಎಮ್,ಸತೀಶ್ ಮಾನಂಪಾಡಿ,ದಯಾನಂದ ಸುವರ್ಣ ಚಿತ್ರಾಪು,ಪ್ರಮೋದ್ ಕೋಟ್ಯಾನ್,ಮನೋಹರ ಸಾಲ್ಯಾನ್,ಉಮೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಶೈಲೇಶ್ ಸ್ವಾಗತಿಸಿದರು. ನರಸಿಂಹ ಪೂಜಾರಿ ವಂದಿಸಿದರು.

Kateel04091702

Comments

comments

Comments are closed.

Read previous post:
Mulki-05091701
ಜಿಲ್ಲಾ ಮಟ್ಟದ ಕರಾಟೆ

ಮೂಲ್ಕಿ: ಮಂಗಳೂರು ನೀರುಮಾರ್ಗ ರೆಡ್ ಕೆಮಲ್ಸ್ ಇಸ್ಲಾಮಿಕ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಮೂಲ್ಕಿ ಪಂಜಿನಡ್ಕ ಕೆ.ಪಿ.ಎಸ್.ಕೆ ಪ್ರೌಡ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಪ್ರದೀಪ್...

Close