ಬ್ರಹ್ಮಶ್ರೀ ನಾರಾಯಣ ಗುರು- ಜನ್ಮದಿನಾಚರಣೆ

ಹಳೆಯಂಗಡಿ: ಶಿಕ್ಷಣದ ಮೂಲಕ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎನ್ನುವುದನ್ನು ನಾರಾಯಣಗುರುಗಳು ಅಂದೇ ತೋರಿಸಿಕೊಟ್ಟಿದ್ದಾರೆ. ಈ ಸಮಾಜದಿಂದ ಪಡೆಯುವ ಸೌಲಭ್ಯ, ಸಹಕಾರದ ಋಣವನ್ನು ಎಂದಿಗೂ ಮರೆಯಬಾರದು, ಇಲ್ಲದಿದ್ದಾಗ ಪಡೆದುದನ್ನು ಇದ್ದಾಗ ನೀಡುವುದರನ್ನು ಬೆಳೆಸಿಕೊಳ್ಳಿರಿ ಎಂದು ಬೆಳ್ತಂಗಡಿ ಶ್ರೀ ಗುರುದೇವಾ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ಹೇಳಿದರು.
ಹಳೆಯಂಗಡಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆಯ ಅಂಗವಾಗಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣೆಯ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾರ್ಥಿವೇತನ ಮತ್ತು ಕ್ರೀಡೋತ್ಸವದ ಬಹುಮಾನವನ್ನು ಸುರತ್ಕಲ್‌ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ವಿತರಿಸಿದರು.
ಕರಿತೋಟ ಲೀಲಾ ವಿ. ಸನಿಲ್ ಸ್ಮರಣಾರ್ಥ ಜಗನ್ನಾಥ ಸಾಲ್ಯಾನ್ ಅವರು ೪೧ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 40 ಸಾವಿರ ರೂಪಾಯಿಯ ವಿಶೇಷ ಪ್ರತಿಭಾ ನಿಧಿಯನ್ನು ಹಸ್ತಾಂತರಿಸಿದರು.
ಹಳೆಯಂಗಡಿ ಪೂಜಾ ಫ್ರೆಂಡ್ಸ್‌ನ ಆಂಬ್ಯುಲೆನ್ಸ್ ಸೇವೆಗಾಗಿ ತೇಜ್‌ಪಾಲ್ ಸುವರ್ಣ, ಯಕ್ಷಗಾನ ಕಲಾವಿದ ರಾಮಚಂದ್ರ ಮುಕ್ಕ, ದಾನಿಗಳಾದ ರಮೇಶ್ ಸುವರ್ಣ ಮತ್ತು ಜಗನ್ನಾಥ ಸನಿಲ್‌ರನ್ನು ಸಮ್ಮಾನಿಸಲಾಯಿತು.
ಲಯನ್ಸ್ ಕ್ಲಬ್‌ನ ಅಧ್ಯಕ್ಷ ವಾಸು ನಾಯಕ್, ಸಂಘದ ಗೌರವಾಧ್ಯಕ್ಷ ಗಣೇಶ್ ಜಿ.ಬಂಗೇರ, ಕಟ್ಟಡ ಸಮಿತಿ ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷ ಶರತ್ ಪಿ. ಸಾಲ್ಯಾನ್ ಉಪಸ್ಥಿತರಿದ್ದರು.
ಕಟ್ಟಡ ಸಮಿತಿಯ ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್ ಸ್ವಾಗತಿಸಿದರು, ಚಂದ್ರಿಕಾ ಪ್ರವೀಣ್ ಕೋಟ್ಯಾನ್ ಬಹುಮಾನಿತರ ಪಟ್ಟಿ ವಾಚಿಸಿದರು, ದೀಪಕ್ ನಾನಿಲ್ ವಂದಿಸಿದರು, ರಶ್ಮಿ ಶರತ್ ಹೆಜಮಾಡಿ ಮತ್ತು ಹಿಮಕರ್ ಟಿ. ಸುವರ್ಣ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈವಿಧ್ಯ ಹಾಗೂ ಸಂಘದ ಮತ್ತು ಯುವವಾಹಿನಿ ಘಟಕದ ಸದಸ್ಯರಿಂದ ವಿವಿಧ ಕಾರ್ಯಕ್ರಮ ಪ್ರದರ್ಶನಗೊಂಡಿತು.

Mulki-06091704

Comments

comments

Comments are closed.

Read previous post:
Mulki-05091703
ನೋಂಪಿ ಉತ್ಸವ

ಮೂಲ್ಕಿ: ಅನಂತ ಚತುರ್ದಶಿ ನೋಂಪಿ ಉತ್ಸವ ಪ್ರಯುಕ್ತ ಮೂಲ್ಕಿ ಕೋಟೆಕೇರಿ ಶ್ರೀ ವೀರ ಮಾರುತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಸೇವೆ ನಡೆಯಿತು.

Close