ಗುರು ಸ್ವಾಮೀಜಿ 163ನೇ ಜನ್ಮ ದಿನಾಚರಣೆ

ಮೂಲ್ಕಿ: ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಶಿಕ್ಷಣಕ್ಕೂ ಸಹಕಾರಿಯಾಗುವ ಕಾರ್ಯ ಅಭಿನಂದನೀಯ ಎಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಮೂಲ್ಕಿ ಕೆ.ಎಸ್.ರಾವ್ ನಗರದ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿ ಯವರ 163ನೇ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮ ಸಾಧಕರ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದ ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ಮಾತನಾಡಿ, ಅಸ್ಪ್ರಶ್ಯತೆ ವರ್ಣ ಭೇಧಗಳ ಮೂಲಕ ಜೀವನದಲ್ಲಿ ಸಂಕಷ್ಟ ಅನುಭವಿಸುತ್ತಿದ್ದ ಜನರನ್ನು ಸಂಘಟಿಸಿ ಅವರಿಗೆ ಶಿಕ್ಷಣ ನೀಡುವ ಮೂಲಕ ಸ್ವಾವಲಂಭಿಗಳನ್ನಾಗಿಸಿದ ಮಹಾನ್ ಚೇತನ ನಾರಾಯಣ ಗುರುಗಳಾಗಿದ್ದು ಅವರ ತತ್ವ ಆದರ್ಶ ಸರ್ವ ಕಾಲಕ್ಕೂ ಪ್ರಸ್ತುತ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿ, ಶ್ರಮಿಕ ವರ್ಗ ತುಂಬಿರುವ ಈ ಕೆ,ಎಸ್.ರಾವ್ ನಗರದಲ್ಲಿ ಸಂಘ ಸ್ಥಾಪಿಸಿ ಗ್ರಾಮೀಣ ಬಡ ವರ್ಗದ ಜನರಿಗೆ ಸಹಾಯ ಸಹಕಾರಗಳ ಜೊತೆಗೆ ಯುವ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಕಾರ್ಯಕ್ರಮ ರೂಪಿಸುವ ಕೆ.ಎಸ್.ರಾವ್ ನಗರದ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಅತಿಥಿಗಳಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್, ಸಂಘದ ಅಧ್ಯಕ್ಷ ರಾಘವ ಸುವರ್ಣ, ಗೌ.ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಎಸ್.ಕೋಟ್ಯಾನ್, ಕೋಶಾಧಿಕಾರಿ ಅಶೋಕ್ ಅಮೀನ್,ಮಹಿಳಾ ಮಂಡಳಿ ಅಧ್ಯಕ್ಷೆ ಸುಮತಿ ಜಿ.ಪೂಜಾರಿ ಉಪಸ್ಥಿತರಿದ್ದರು. ಮುಂಜಾನೆ ನಡೆದ ಭಜನಾ ಸಂಕೀರ್ಥನೆಯನ್ನು ತನ್ವಿ ಅನಿಲ್ ಕುಮಾರ್ ದಂಪತಿ ಉದ್ಘಾಟಿಸಿದರು. ಸಂಘದಲ್ಲಿ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವ ಜಗದೀಶ ಎಂ ರವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೀಡಲಾಯಿತು. ರಾಘವ ಎ.ಸುವರ್ಣ ಸ್ವಾಗತಿಸಿದರು. ಹರಿಶ್ಚಂದ್ರ ಎಸ್.ಕೋಟ್ಯಾನ್ ನಿರೂಪಿಸಿದರು. ಅಶೋಕ್ ಅಮೀನ್ ವಂದಿಸಿದರು.

Mulki-060917013

Comments

comments

Comments are closed.

Read previous post:
Mulki-06091706
ಮುಲ್ಕಿ ಪರಿಸರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

ಮೂಲ್ಕಿ: ಮೂಲ್ಕಿ ಪರಿಸರದ ವಿವಿಧ ಬಿಲ್ಲವ ಸಮಾಜ ಸೇವಾ ಸಂಘಗಳಲ್ಲಿ ಪುಷ್ಪಾಲಂಕೃತ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮೂರ್ತಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಮಟ್ಟು ಬ್ರಹ್ಮಶ್ರೀ ನಾರಾಯಣಗುರು...

Close