ಗುರು ಸೇವಾ ಸ್ಮರಣಾ ಕಾರ್ಯಕ್ರಮ

ಕಿನ್ನಿಗೋಳಿ: ನಿವೃತ್ತ ಶಿಕ್ಷಕರನ್ನು ಒಟ್ಟು ಸೇರಿಸಿ ಗೌರವಿಸಿದ್ದು ವಿಶಿಷ್ಠವಾದ ಕಾರ್ಯಕ್ರಮ ಎಂದು ಸಂತ ಅಲೋಶಿಯಸ್ ಕಾಲೇಜು ರೆಕ್ಟರ್ ರೆ.ಫಾ.ಡೈನೀಶಿಯಸ್ ವಾಜ್ ಹೇಳಿದರು.
ಐಕಳ ಪೊಂಪೈ ಕಾಲೇಜು ರಾಷ್ಡ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಕಿನ್ನಿಗೋಳಿಯ ಸುತ್ತಮುತ್ತಲಿನ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರ ಗೌರವಾರ್ಥಗುರು ಸೇವಾ ಸ್ಮರಣೆಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಂಪೈ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ. ವಿಕ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರೆನ್ಸ್ ಮಿರಾಂದ ಸ್ವಾಗತಿಸಿದರು. ಪ್ರೊ. ಯೋಗಿಂದ್ರ ಬಿ. ಪರಿಚಯಿಸಿದರು. ರಾಷ್ಡ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ.ವಿಕ್ಟರ್ ವಾಜ್ ಇ. ವಂದಿಸಿದರು. ಜೋಯ್ಸ್ ಮ್ಯೂರಲ್ ಮಸ್ಕರೇನಸ್‌ ಕಾರ್ಯಕ್ರಮವನ್ನು ನಿರೂಪಿಸಿದರು.
ಗುರು ಸೇವಾ ಸ್ಮರಣಾಕಾರ್ಯಕ್ರಮದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಷ್ಡ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ೭೦ಕ್ಕಿಂತಲೂ ಅಧಿಕ ನಿವೃತ್ತ ಶಿಕ್ಷಕರು ಭಾಗವಹಿಸಿದ್ದರು.

Kinnigoli-11091707

Comments

comments

Comments are closed.

Read previous post:
Kinnigoli-11091706
ಕಿನ್ನಿಗೋಳಿ ಮುದ್ದು ಕೃಷ್ಣ ವೇಷ ಸ್ಪರ್ಧೆ

ಕಿನ್ನಿಗೋಳಿ: ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಹಾಗೂ ಸೂಕ್ತ ಅವಕಾಶ ನೀಡಿದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಉದ್ಯಮಿ ಸಚ್ಚಿದಾನಂದ ಭಟ್ ಹೇಳಿದರು. ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ,...

Close