ಕಟೀಲು ಗುರು ಮಂದಿರದ ಶಿಲಾನ್ಯಾಸ

ಕಿನ್ನಿಗೋಳಿ: ಆಧ್ಯಾತ್ಮಿಕ ಕಾಂತ್ರಿಯನ್ನು ಹಾಗೂ ಎಲ್ಲಾ ವರ್ಗದವರನ್ನು ಸಮಾಜದ ಮುಂಚೂಣಿಗೆ ತರುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರು ಕಾಂತ್ರಿ ಪುರುಷರಾಗಿದ್ದಾರೆ. ಎಂದು ಮಂಗಳೂರು ನಗರಪಾಲಿಕೆ ಮೇಯರ್ ಕವಿತಾ ಸನಿಲ್ ಹೇಳಿದರು.
ಭಾನುವಾರ ಮೆನ್ನಬೆಟ್ಟು- ಕಟೀಲು ಗ್ರಾಮ ವ್ಯಾಪ್ತಿಯ ಕಟೀಲು ಬಿಲ್ಲವ ಸಮಾಜ ಸೇವಾ ಸಂಘ ( ರಿ ) ಇದರ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 163 ನೇ ಗುರು ಜಯಂತಿ ಆಚರಣೆ ಹಾಗೂ ನೂತನ ಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಹಾಗೂ ಆಧ್ಯಾತ್ಮಿಕತೆಯ ಮೂಲಕ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡುವ ಮೂಲಕ ಆಸ್ತಿಕತೆಯನ್ನು ಉಳಿಸಿ ಜಾತಿ ತಾರತಮ್ಯವನ್ನು ಬದಿಗೊತ್ತುವಂತೆ ಮಾಡಿ ಒಂದೇ ಮತ ಒಂದೇ ಧರ್ಮವನ್ನು ಸಾರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು ಎಲ್ಲರಿಗೂ ಮಾದರಿ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅಲ್ಲದೆ ನೂತನವಾಗಿ ನಿರ್ಮಾಣವಾಗುತ್ತಿರುವ ಗುರು ಮಂದಿರಕ್ಕೆ ಸಂಸದರ ನಿಧಿಯಿಂದ ೫ಲಕ್ಷರೂ ನೀಡುವ ಭರವಸೆ ನೀಡಿದರು.
ಸಮಾಜದಲ್ಲಿ ಸಂಘಟನಾ ಶಕ್ತಿಗೆ ರೂಪ ಕೊಟ್ಟ ಬ್ರಹ್ಮಶ್ರೀ ನಾರಾಯಣಗುರುಗಳು ಅವರ ಸಂದೇಶ, ತತ್ವ ಆದರ್ಶಗಳು ನಮಗೆ ದಾರಿದೀಪ. ಧಾರ್ಮಿಕತೆಯ ಜೊತೆಗೆ ಶಿಕ್ಷಣದ ಮೂಲಕ ಸಮಾಜ ಮುಂದೆ ಬರಬೇಕು ಎಂದು ಮುಲ್ಕಿ ಮೂಡಬಿದ್ರಿ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ನೂತನ ಗುರು ಮಂದಿರಕ್ಕೆ ಶಾಸಕರ ನಿಧಿಯಿಂದ ೫ಲಕ್ಷರೂ ನೀಡುವ ಭರವಸೆ ನೀಡಿದರು.
ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉದ್ಯಮಿ ಗಿರೀಶ್ ಶೆಟ್ಟಿ, ಉದ್ಯಮಿಗಳಾದ ದೊಡ್ಡಯ್ಯ ಮೂಲ್ಯ, ಉದಯ ಪೂಜಾರಿ ಕಟೀಲು, ಲೋಕಯ್ಯ ಸಾಲ್ಯಾನ್ ಕೊಂಡೇಲ, ಬಿಜೆಪಿಯ ಮುಖಂಡ ಸುದರ್ಶನ್ ಮೂಡಬಿದಿರೆ, ಮಾಜಿ ತಾ. ಪಂ. ಸದಸ್ಯ ತಿಮ್ಮಪ್ಪ ಕೋಟ್ಯಾನ್ ಕಟೀಲು, ಉದ್ಯಮಿ ಡೊಲ್ಪಿ ಸಂತು ಮಾಯೋರ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ರಮಾನಂದ ಪೂಜಾರಿ, ಜಯಂತ ಕರ್ಕೇರ ಅಡ್ಯಣಗುತ್ತು, ಚಂದ್ರಹಾಸ ಸಾಲ್ಯಾನ್ ಕೊಂಡೇಲ, ಭಾಸ್ಕರ ಪೂಜಾರಿ ಉಲ್ಲಂಜೆ, ಅರುಣ್ ಕುಮಾರ್ ಕಟೀಲು, ಲಕ್ಷ್ಮೀಪೂಜಾರ್ತಿ, ಲೀಲಾ ವಾಮನ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ್ ಕಟೀಲು ಸ್ವಾಗತಿಸಿದರು. ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಪ್ರಸ್ತಾವನೆಗೈದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಅಜಾರು ವಂದಿಸಿದರು.

Kinnigoli-11091704

Comments

comments

Comments are closed.

Read previous post:
Kinnigoli-11091703
ಕೆಮ್ರಾಲ್ ಸುರಗಿರಿಯಲ್ಲಿ ದೀಪ ಪೂಜ

ಕಿನ್ನಿಗೋಳಿ : ಋಷಿ ಮುನಿಗಳ ಕಾಲದಿಂದ ಬೆಳೆದು ಬಂದ ಸನಾತನ ಹಿಂದು ಧರ್ಮದ ವೇದಗಳು ಧಾರ್ಮಿಕ ಆಚರಣಾ ಪದ್ಧತಿಗಳು ನಮ್ಮ ಸಂಸ್ಕೃತಿ ಸಂಸ್ಕಾರವಾಗಿದ್ದು ಅದನ್ನು ಭವಿಷ್ಯದಲ್ಲೂ ಉಳಿಸುವ ಕಾರ್ಯ...

Close