ಕೆಮ್ರಾಲ್ ಸುರಗಿರಿಯಲ್ಲಿ ದೀಪ ಪೂಜ

ಕಿನ್ನಿಗೋಳಿ : ಋಷಿ ಮುನಿಗಳ ಕಾಲದಿಂದ ಬೆಳೆದು ಬಂದ ಸನಾತನ ಹಿಂದು ಧರ್ಮದ ವೇದಗಳು ಧಾರ್ಮಿಕ ಆಚರಣಾ ಪದ್ಧತಿಗಳು ನಮ್ಮ ಸಂಸ್ಕೃತಿ ಸಂಸ್ಕಾರವಾಗಿದ್ದು ಅದನ್ನು ಭವಿಷ್ಯದಲ್ಲೂ ಉಳಿಸುವ ಕಾರ್ಯ ಆಗಬೇಕು ಎಂದು ನೀರುಳಿಕೆ ಶ್ರೀಮಾತಾ ಸೇವಾಶ್ರಮದ ಸಂಚಾಲಕ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಹೇಳಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ದುರ್ಗಾ ಶಕ್ತಿ ಕೆಮ್ರಾಲ್ ಮಂಡಲ ಹಾಗೂ ಗ್ರಾಮ ವಿಕಾಸ ಮೂಲ್ಕಿ ಇದರ ವತಿಯಿಂದ ನಡೆದ ದೀಪ ಪೂಜನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಎನ್‌ಐಟಿಕೆ ಪ್ರೊ. ಶ್ರೀಕಾಂತ್ ರಾವ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ರಾಷ್ಟ್ರ ಸೇವಿಕಾದ ಜಿಲ್ಲಾ ಕಾರ್ಯವಾಹಿ ಮಾಲತಿ ಬಳ್ಕುಂಜೆ, ರಾಜೇಶ್ ದಾಸ್ ಮತ್ತಿತರರು ಉಪಸ್ಥಿತರಿದ್ದರು. ಉಮೇಶ್ ಪಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-11091703

Comments

comments

Comments are closed.

Read previous post:
Mulki-09091701
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

ಮೂಲ್ಕಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯ ವಿವಿಧ ವಿಭಾಗಗಳಲ್ಲಿ 5 ಪ್ರಶಸ್ತಿ ಗಳಿಸಿದೆ ಕೊಂಕಣಿ ಕಂಠಪಾಠದಲ್ಲಿ ಏಳನೇ ತರಗತಿಯ ಲೀನಾ ಪುರ್ತಾದೊ ಪ್ರಥಮ ಹಾಗೂ ಜನಪದ...

Close