ಕಿನ್ನಿಗೋಳಿ ಮುದ್ದು ಕೃಷ್ಣ ವೇಷ ಸ್ಪರ್ಧೆ

ಕಿನ್ನಿಗೋಳಿ: ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಹಾಗೂ ಸೂಕ್ತ ಅವಕಾಶ ನೀಡಿದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಉದ್ಯಮಿ ಸಚ್ಚಿದಾನಂದ ಭಟ್ ಹೇಳಿದರು.
ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ , ಭ್ರಾಮರೀ ಮಹಿಳಾ ಸಮಾಜ ಮನೆನ್ಬೆಟ್ಟು , ರೋಟರಿ ಕ್ಲಬ್ ಕಿನ್ನಿಗೋಳಿ ಲಯನ್ಸ್ ಕ್ಲಬ್ ಕಿನ್ನಿಗೋಳಿ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ( ರಿ ) ಕಿನ್ನಿಗೋಳಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ನಡೆದ ಮುದ್ದು ಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಲಯನ್ಸ್ ಮಲತಾ ಸುಧಾಕರ ಶೆಟ್ಟಿ , ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್, ವಲೇರಿಯನ್ ಸಿಕ್ವೇರಾ, ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಕುಲಾಲ್, ಸುಮಿತ್ ಕುಮಾರ್, ಉಷಾ ನರೇಂದ್ರ ಕೆರೆಕಾಡು, ವಾಸಂತಿ ಮತ್ತಿತರರು ಉಪಸ್ಥಿತರಿದ್ದರು. ,
ಅನುಷಾ ಕರ್ಕೇರಾ ಕೊಡೆತ್ತೂರು ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ
ಎರಡು ವರ್ಷದದೊಳಗಿನ ಮಕ್ಕಳು – ಎ ವಿಭಾಗ – ಪ್ರಥಮ – ಸುಶಾನ್ ರಾಜ್, ದ್ವಿತೀಯ- ತನಿಶಾ ಆರ್ . ಸಾಲ್ಯಾನ್, ತೃತೀಯ – ಅರ್ನವ್
ಬಿ. ವಿಭಾಗ – ತಕ್ಷಿಲ್ ಎಲ್ ದೇವಾಡಿಗ, ದ್ವಿತೀಯ – ಹರ್ಷ ದೆವಾಡಿಗ, ತೃತೀಯ- ಸಮೃದ್ಧ್ ಎಸ್,
ಸಿ. ವಿಭಾಗ – ಪ್ರಥಮ – ದಿಶಾ ಎಸ್ , ದ್ವಿತೀಯ- ಗ್ಯಾನ್ ಜಿ. ಕುಂದರ್, ತೃತೀಯ- ಶ್ರೀ ವಲ್ಲಿ
ರಾಧಾಕೃಷ್ಣ ವಿಭಾಗ – ಪ್ರಥಮ – ವೈಭವಿ ಮತ್ತು ಸಾರ್ಥಕ್, ದ್ವಿತೀಯ- ದಕ್ಷ್ – ಇಷಿತಾ, ತೃತೀಯ- ಅದ್ವಿತ್ ಮತ್ತು ವೈಭವಿ , ಪೋತ್ಸಾಹಕರ ಬಹುಮಾನ – ವಿಹಾನ್ ಪಡೆದುಕೊಂಡರು.

Kinnigoli-11091706

Comments

comments

Comments are closed.

Read previous post:
Kinnigoli-11091705
ಕೃಷ್ಣನ ಆದರ್ಶ ಮಕ್ಕಳಿಗೆ ಮಾರ್ಗದರ್ಶನವಾಗಲಿ

ಕಿನ್ನಿಗೋಳಿ: ಶ್ರೀ ಕೃಷ್ಣನ ಆದರ್ಶ ನಮ್ಮ ಮಕ್ಕಳಿಗೆ ಬದುಕಿಗೆ ಮಾರ್ಗಧರ್ಶನವಾಗಬೇಕು ಎಂದು ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು. ಕೊಡೆತ್ತೂರು ದೇವಸ್ಯ ಮಠದಲ್ಲಿ ಗ್ರಾಮದ ಮಕ್ಕಳಿಗಾಗಿ ನಡೆದ...

Close