ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಜಮಾಬಂಧಿ

ಮೂಲ್ಕಿ: ಮೂಲ್ಕಿ ಹೋಬಳಿಯ ಅತಿಕಾರಿ ಬೆಟ್ಟು ಗ್ರಾಮದ ಜಮಾಬಂಧಿ ಕಾರ್ಯಕ್ರಮವು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬಹು ನೀರಸವಾಗಿ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಎರಡು ಸದಸ್ಯರು ಬಿಟ್ಟರೆ ಮಿಕ್ಕೆಲ್ಲ ಸದಸ್ಯರು ಗೈರು ಹಾಜರಾಗಿದ್ದರು. ಬೆರಳೆಣಿಕೆಯ ಗ್ರಾಮಸ್ಥರ ಹಾಜರಾತಿಯಿಂದ ಯಾವುದೇ ಪ್ರಶ್ನೆಗಳಿಲ್ಲದೆ ಜಮಾಬಂಧಿ ನಡೆಯಿತು.
ಈ ಸಂದರ್ಭ ಜಮಾಬಂದಿ ಅಧಿಕಾರಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಯೋಜನಾ ಮತ್ತು ಮೌಲ್ಯಮಾಪನಾಧಿಕಾರಿ ಸಂಧ್ಯಾ ಕೆ.ಎಸ್ ಮಾತನಾಡಿ,ಗ್ರಾಮ ಪಂಚಾಯಿತಿಯಿಂದ ನಡೆದ ಯೋಜನೆಗಳು ಪಂಚಾಯಿತಿ ಆದಾಯ ಖರ್ಚು ವೆಚ್ಚಗಳನ್ನ ಕೂಲಂಕುಷ ತನಿಖೆಯ ವಿವಿರಗಳನ್ನು ಗ್ರಾಮಸ್ಥರಿಗೆ ತಿಳಿಯಪಡಿಸಲು ಜಮಾಬಂಧಿ ಕಾರ್ಯ ನಡೆಯುತ್ತಿದ್ದು ಈ ಬಗ್ಗೆ ಹೆಚ್ಚಿನ ಗ್ರಾಮಸ್ಥರು ಬಂದು ನೆಡಿಸಿಕೊಡಬೇಕು ಈ ಯೋಜನೆಗಳು ಮತ್ತು ಖರ್ಚು ವೆಚ್ಚಗಳ ಬಗ್ಗೆ ಇರುವ ಸಂಶಯ ನಿವಾರಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಶಾರದಾ ವಸಂತ್ ವಹಿಸಿದ್ದರು. ಯೋಜನಾ ಮತ್ತು ಮೌಲ್ಯಮಾಪನಾ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಕಮಲೇಶ್, ಪಂಚಾಯಿತಿ ರಾಜ್ ಕಿರಿಯ ಇಂಜಿನಿಯರ್ ಹರೀಶ್,ಪಂಚಾಯಿತಿ ಸದಸ್ಯರಾದ ಮನೋಹರ ಕೋಟ್ಯಾನ್ ಮತ್ತು ಶಾರದಾ ಉಪಸ್ಥಿತರಿದ್ದರು. ಪಂಚಾಯಿತಿ ಲೆಕ್ಕಪರಿಶೀಲಕ ಯೋಗಿಶ್ ನಾನಿಲ್ ಸ್ವಾಗತಿಸಿ ಕಲಾಪ ನಿರ್ವಹಿಸಿದರು.ಸ್ಥಳೀಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

Mulki-12091702

Comments

comments

Comments are closed.

Read previous post:
Mulki-12091701
ಸುಂದರ ರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ

ಮೂಲ್ಕಿ: ಮೂಲ್ಕಿ ಸುಂದರ ರಾಮ ಶೆಟ್ಟಿಯವರು ವಿದ್ಯಾಹತೆಯಿಲ್ಲದಿದ್ದರೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬ್ಯಾಂಕ್ ನಲ್ಲಿ ಉದ್ಯೋಗ ನೀಡಿದ ಮಹಾನ್ ವ್ಯಕ್ತಿಯಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳಲ್ಲಿನ ದೇವರ ಕೋಣೆಯಲ್ಲಿ...

Close