ಸುಂದರ ರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ

ಮೂಲ್ಕಿ: ಮೂಲ್ಕಿ ಸುಂದರ ರಾಮ ಶೆಟ್ಟಿಯವರು ವಿದ್ಯಾಹತೆಯಿಲ್ಲದಿದ್ದರೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬ್ಯಾಂಕ್ ನಲ್ಲಿ ಉದ್ಯೋಗ ನೀಡಿದ ಮಹಾನ್ ವ್ಯಕ್ತಿಯಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳಲ್ಲಿನ ದೇವರ ಕೋಣೆಯಲ್ಲಿ ಅವರ ಭಾವ ಚಿತ್ರಕ್ಕೆ ಪೂಜೆ ಪಡೆಯುವಂತಹ ವ್ಯಕ್ತಿತ್ವವನ್ನು ಹೊಂದಿರುವ ಅವರ ಹೆಸರಿನ ಪ್ರಶಶ್ತಿಯನ್ನು ಪಡೆಯುತ್ತಿರುವುದು ತನ್ನ ಜೀವಮಾನದ ಶ್ರೇಷ್ಥ ಪ್ರಶಸ್ತಿಯೆಂದು ಮಾಜಿ ಸಚಿವ ಕೆ ಅಮರನಾಥ ಶೆಟ್ಟಿಯವರು ಹೇಳಿದರು. ಮೂಲ್ಕಿಯ ಬಂಟರ ಸಂಘದ ಆಶ್ರಯದಲ್ಲಿ ಮೂಲ್ಕಿಯ ಕಾರ್ನಾಡಿನ ಬಂಟರ ಸಭಾ ಭವನದಲ್ಲಿ ನಡೆದ 2017-18 ರ ಸಾಲಿನ ವಿದ್ಯಾರ್ಥಿ ವೇತನ ವಿತರಣೆ,ಪ್ರತಿಭಾ ಪುರಸ್ಕಾರ,ಮೂಲ್ಕಿ ಸುಂದರ ರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ,ಸಾಧಕರಿಗೆ ಸನ್ಮಾನ ಮತ್ತು ಬೆಂಗಳೂರು ಬಂಟರ ಸಂಘದ ಪ್ರಾಯೋಜಕತ್ವದಲ್ಲಿ *ಜೀವನಕ್ಕಾಗಿ ಕಾಮಧೇನು* ಅನುದಾನ ಬಿಡುಗಡೆ ಸಮಾರಂsದಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರತಿಷ್ಟಿತ 2017 ರ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ವಹಿಸಲಿದ್ದು ನಿಟ್ಟೆ ಶಿಕ್ಷಣ ಸಂಸ್ತೆ,ನಿಟ್ಟೆ ವಿ.ವಿಯ ಕುಲಪತಿ ಡಾ ಎನ್ ವಿನಯ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜ ಸೇವೆಯಲ್ಲಿನ ಸಂಜೀವ ಕೊರಗ ಶೆಟ್ಟಿ ಶಿಮಂತೂರು,ಯೋಗ ಗುರು ಜಯ ಮುದ್ದು ಶೆಟ್ಟಿ ಕಿಲ್ಪಾಡಿ,ಕೃಷಿ ಕ್ಷೇತ್ರದ ಭಾಸ್ಕರ ಶೆಟ್ಟಿ ಸಂಕಲಕರಿಯ ಮುಂಡ್ಕೂರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಹಿಮಾಂಶೂ ಹೆಗ್ಡೆ ಹಳೆಯಂಗಡಿ,ಅಕ್ಷಯ ಶೆಟ್ಟಿ ಕಾರ್ನಾಡು,ಹೃತಿಕ್ ಶೆಟ್ಟಿ ಪೊಸ್ರಾಲ್ ಮತ್ತು ಕುಮಾರಿ ಶ್ರೀನಿಽ ಮುಂಡ್ಕೂರುರನ್ನು ಸನ್ಮಾನಿಸಲಾಯಿತು. .ಬೆಂಗಳೂರು ಬಂಟರ ಸಂಘದ ಸಮಾಜ ಸೇವಾ ವಿಭಾಗದ ಚೇರ್ ಮೆನ್ ರಾಧಾಕೃಷ್ಣ ಶೆಟ್ಟಿ,ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಮುಂಬ್ಯೆನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಳೆಪಾಡಿ,ಉದ್ಯಮಿ ರತ್ನಾಕರ ಶೆಟ್ಟಿ ಮುಂಡ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಪ್ರಕಾಶ್ಚಂದ್ರ ಭಂಡಾರಿ,ಮೂಲ್ಕಿ ಬಂಟರ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ,ಕೋಶಾಽಕಾರಿ ಸುಂದರ ಶೆಟ್ಟಿ,ಜೊತೆ ಕಾರ್ಯದರ್ಶಿ ಮಲ್ಲಿಕಾ ಪೂಂಜ,ಯುವ ಮತ್ತು ಕ್ರೀಡಾ ವಿಭಾಗದ ಸಂಚಾಲಕ ರಾಜೇಶ್ ಕುಮಾರ್ ಶೆಟ್ಟಿ,ಮಹಿಳಾ ವಿಭಾಗದ ಸಂಚಾಲಕಿ ಬಬಿತಾ ಯು ಶೆಟ್ಟಿ,ಪತ್ರಿಕಾ ಮತ್ತು ಪ್ರಚಾರ ವಿಭಾಗದ ಸಂಚಾಲಕ ಶರತ್ ಶೆಟ್ಟಿ ಮತ್ತಿತರಿದ್ದರು. ಮೂಲ್ಕಿ ಬಂಟರ ಸಂಘದ ಕಾರ್ಯದರ್ಶಿ ಕೆ ರವಿರಾಜ ಶೆಟ್ಟಿ ಸ್ವಾಗತಿಸಿದರು,ಪುರುಷೋತ್ತಮ ಶೆಟ್ಟಿ ವಂದಿಸಿದರು,ಸಾಯಿನಾಥ ಶೆಟ್ಟಿ ನಿರೂಪಿಸಿದರು.

Mulki-12091701

Comments

comments

Comments are closed.

Read previous post:
Kinnigoli-12091701
ಸ್ವಚ್ಚತಾ ಅಂದೋಲನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಸ್‌ಕೋಡಿ ಬಸ್ಸುನಿಲ್ದಾಣ ಹಾಗೂ ರಿಕ್ಷಾ ನಿಲ್ದಾಣದ ಬಳಿ ಕಿನ್ನಿಗೋಳಿ ವಲಯದ ಬಸ್ಸು ಚಾಲಕ ಹಾಗೂ ನಿರ್ವಾಹಕರ ಸಂಘದ ವತಿಯಿಂದ ಇತ್ತೀಚೆಗೆ ಶ್ರಮದಾನ ಸ್ವಚ್ಚತಾ ಅಂದೋಲನ...

Close