ಇಸ್ಕಾನ್ – ಶೂ ವಿತರಣಾ ಕಾರ್ಯಕ್ರಮ

ಮೂಲ್ಕಿ: ಸರಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಶೆಕ್ಷಣಿಕ ಸಾಧಕರಾಗುವ ಗುರಿ ಹೊಂದಿದರೆ ಸುಲಭವಾಗಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮೂಲ್ಕಿ ಪಂಜಿನಡ್ಕ ಕೆ.ಪಿ.ಎಸ್.ಕೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿ ಪ್ರತಿಭಾ ಸುಂದರ್‌ರಾಜ್ ಕೊಡಮಾಡಿರುವ ಸುಮಾರು 1.20 ಲಕ್ಷ ಮೌಲ್ಯದ ಸಮವಸ್ತ್ರ ಹಾಗೂ ಶೈಕ್ಷಣಿಕ ಸಲಕರಣೆ ಮತ್ತು ಇಸ್ಕಾನ್ ವತಿಯಿಂದ ಶೂ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರದ ಸಾಧಕರನ್ನು ಗುರುತಿಸಿದರೆ ಅವರು ಸರಕಾರಿ ಶಾಲೆಗಳಿಂದ ಕಲಿತ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಾಗಿದ್ದವರು.ವಿದ್ಯಾರ್ಥಿಗಳು ಅವರ ಸಾಧನೆಯನ್ನು ಮಾಗದರ್ಶಿಯಾಗಿರಿಸಿ ಸಾಧನೆ ಮಾಡುವ ಮೂಲಕ ಉನ್ನತಿಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡಮಿ ಮಾಜಿ೮ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ, ಹಿಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ ಹಲವು ಮೈಲು ದೂರ ಕಾಲಿಗೆ ಚಪ್ಪಲಿ ಇಲ್ಲದೆ ನಡೆಯಬೇಕಾಗಿತ್ತು. ಇಂದಿನ ಸಮವಸ್ತ್ರ ಅಂದು ಹಗಲು ಕಸಸಾಗಿತ್ತು ಆದರೆ ಇಂದಿನ ದಿನಗಳಲ್ಲಿ ಸರಕಾರ ಅಥವಾ ದಾನಿಗಳು ಮಕ್ಕಳ ಶಿಕ್ಷಣ ಸೌಲಭ್ಯಗಳನ್ನು ಪೂರೈಸುವ ಉತ್ತಮ ಗುಣ ಹೊಂದಿದ್ದಾರೆ ವಿದ್ಯಾರ್ಥಿಗಳು ಶೈಕ್ಷಣಿಕ ಸವಲತ್ತುಗಳನ್ನು ಉಪಯೋಗಿಸಿ ಸಾಧಕರಾಗಿ ಬೆಳಗಬೇಕು ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ದಾನಿ ಸತೀಶ್ ಶೆಟ್ಟಿ, ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಂಗನಾಥ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ ಶೆಟ್ಟಿ, ಕೆ.ಪಿ.ಎಸ್.ಕೆ ಶಾಲೆಯ ಟ್ರಸ್ಟಿಗಳಾದ ಸುರೇಂದ್ರ ಕಾಮತ್ ಮತ್ತು ವಿಮಲಾ ಕಾಮತ್, ಶಾಲಾ ಸಂಚಾಲಕ ಗಂಗಾಧರ ಶೆಟ್ಟಿ ಬರ್ಕೆತೋಟ, ನಿವೃತ್ತ ಮುಖ್ಯೋಪಾದ್ಯಾಯ ಅಚ್ಚುತ ಆಚಾರ್ಯ, ಪ್ರೌಢ ಶಾಲಾ ಮುಖ್ಯೋಪಾದ್ಯಾಯ ನಾಗಭೂಷಣ ರಾವ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಂಬರೀಶ ಲಮಾಣಿ ಉಪಸ್ಥಿತರಿದ್ದರು.
ಐಸ್ಟಿ ಸುರೇಂದ್ರ ಕಾಮತ್ ಸ್ವಾಗತಿಸಿದರು. ಶಿಕ್ಷಕ ನೋಣಯ್ಯ ರೆಂಜಾಳ ನಿರೂಪಿಸಿದರು. ಅಂಬರೀಶ ಲಮಾಣಿ ವಂದಿಸಿದರು.

Mulki-13071701

Comments

comments

Comments are closed.

Read previous post:
Mulki-12091702
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಜಮಾಬಂಧಿ

ಮೂಲ್ಕಿ: ಮೂಲ್ಕಿ ಹೋಬಳಿಯ ಅತಿಕಾರಿ ಬೆಟ್ಟು ಗ್ರಾಮದ ಜಮಾಬಂಧಿ ಕಾರ್ಯಕ್ರಮವು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬಹು ನೀರಸವಾಗಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಎರಡು ಸದಸ್ಯರು...

Close