ತಾಲೂಕು ಬಾಲ್ ಬ್ಯಾಡ್‌ಮಿಂಟನ್

ಕಿನ್ನಿಗೋಳಿ: ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಉತ್ತರ ವಲಯ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಹಾಗೂ ಕಟೀಲು ದೇವಳದ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್‌ಮಿಂಟನ್ ಪಂದ್ಯಾಟದಲ್ಲಿ ಕಟೀಲು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿವೆ
ಪ್ರಾಥಮಿಕ ಶಾಲೆಯಲ್ಲಿ ಬಾಲಕರ ವಿಭಾಗದಲ್ಲಿ ಮೊರಾರ್ಜಿ ಕಮ್ಮಾಜೆ ದ್ವಿತೀಯ, ಬಾಲಕಿಯರಲ್ಲಿ ಮಂಗಳೂರು ಬೆಸೆಂಟ್ ಶಾಲೆ ದ್ವಿತೀಯ ಸ್ಥಾನ ಪಡೆದವು. ಪ್ರೌಢಶಾಲೆಯಲ್ಲಿ ಬಾಲಕರಲ್ಲಿ ಬಜಪೆ ಸೈಂಟ್ ಜೋಸೆಫ್ ಶಾಲೆ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಕಮ್ಮಜೆ ಮೊರಾರ್ಜಿ ಶಾಲೆ ದ್ವಿತೀಯ ಸ್ಥಾನ ಪಡೆದವು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ ಶೆಟ್ಟಿ, ದೈಹಿಕ ಪರಿವೀಕ್ಷಕರಾದ ಆಶಾ ನಾಯಕ್, ಉಪಪ್ರಾಚಾರ್ಯ ಸೋಮಪ್ಪ ಅಲಂಗಾರು, ಸಾಯಿನಾಥ ಶೆಟ್ಟಿ, ಕೃಷ್ಣ ಕೆ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆ ಸಮಾರಂಭದಲ್ಲಿ ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಮುಖ್ಯ ಶಿಕ್ಷಕಿ ಸರೋಜಿನಿ, ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ, ರಮಾನಂದ ಪೂಜಾರಿ, ದಯಾನಂದ ಮಾಡ ಉಪಸ್ಥಿತರಿದ್ದರು.

Kinnigoli-13091701

Comments

comments

Comments are closed.

Read previous post:
Kinnigoli-12091705
Maryvale School : 3rd in patriotic song

Maryvale Higher Primary students, bagged third prize in patriotic song at district level  Partiba Karanji held at Indra prastha English...

Close