ಮೀಟರ್ ಭತ್ತದಲ್ಲಿ ಭರ್ಜರಿ ಇಳುವರಿ

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಯುಗದಲ್ಲಿ ಯುವ ಜನಾಂಗ ಕೃಷಿ ಕ್ಷೇತ್ರವನ್ನೇ ಬಿಟ್ಟು ನಗರದತ್ತ ಕಾಯಕ ಜೀವನ ಸಾಗಿಸುವತ್ತ ಆಸಕ್ತಿ ತೋರಿಸುವುವ ಕಾಲದಲ್ಲಿ ಕೃಷಿಯೇ ತನ್ನ ಜೀವಾಳ ಎಂದುಕೊಂಡು ಕರುಣಾಕರ ಶೆಟ್ಟಿ ಉಳೆಪಾಡಿ ಅವರು ಕೃಷಿಕರಲ್ಲಿ ಭತ್ತದ ಬೇಸಾಯದಲ್ಲಿ ವಿಮುಖ ಹೊಂದುತ್ತಿರುವ ಸಂದರ್ಭ ಭತ್ತದ ಬೇಸಾಯವನ್ನೆ ಸವಾಲಾಗಿ ತೆಗೆದುಕೊಂಡು ಹೊಸ ತಳಿಯಾದ ಮೀಟರ್ ಭತ್ತದಲ್ಲಿ ಅಧಿಕ ಇಳುವರಿ ಪಡೆವ ಕನಸನ್ನು ನನಸಾಗಿಸಿದ್ದಾರೆ.
ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳೆಪಾಡಿ ಮುಗೇರಬೆಟ್ಟು ವಿನಲ್ಲಿ ತನ್ನ ಯಶಸ್ವಿ ಕೃಷಿ ಜೀವನ ನಡೆಸುತ್ತಾ ಬಂದಿರುವ ಕರುಣಾಕರ ಶೆಟ್ಟಿ ಆಧುನಿಕತೆಯೊಂದಿಗೆ ಹಳೆ ತಲೆಮಾರಿನ ಸಾವಯವ ಕೃಷಿಯನ್ನು ಬಳಸಿ ಉತ್ತಮ ಇಳುವರಿಗಳ ತಳಿಗಳನ್ನು ಬಳಸಿ ಯಾವ ಬೆಳೆ ಉತ್ತಮ ಫಸಲನ್ನು ಪಡೆಯಬಹುದು ತಾನೇ ಪ್ರಾಯೋಗಿಕವಾಗಿ ತಮ್ಮ ಗದ್ದೆಯಲ್ಲಿ ಬಳಸಿ ಇಳುವರಿ ಹೆಚ್ಚು ಸಿಗುತ್ತದೆ ಎಂದು ಕಂಡುಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಹಲವರಿಂದ ಕೇಳಿ ತಿಳಿದುಕೊಂಡು ಮೀಟರ್ ತಳಿಯನ್ನು ಆರಿಸಿ ಸ್ವಲ್ಪ ಜಾಗದಲ್ಲಿ ಬೀಜ ಹಾಕಿ ನೇಜಿ ಮಾಡಿ ಉತ್ತಮ ಇಳುವರಿ ಪಡೆದರು. ಪ್ರಸ್ತುತ ಎರಡು ವರ್ಷಗಳಿಂದಲೂ ವರ್ಷದಿಂದ ವರ್ಷಕ್ಕೆ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಈ ವರ್ಷದ ಮುಂಗಾರು ಮಳೆಯಲ್ಲಿ ತ್ತೊಂಬತ್ತು ಕಿಲೋ ಗ್ರಾಂ ಭತ್ತದ ನೇಜಿ ಮಾಡಿ ಸುಮಾರು ಐದು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದಾರೆ. ಸುಮಾರು ಒಂದು ಎಕರೆಯಲ್ಲಿ 25 ರಿಂದ 30 ಕ್ವಿಂಟಾಲ್ ಇಳುವರಿ ತೆಗೆಯುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷದಿಂದ ಈ ವರ್ಷ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಾವಯವ ಗೊಬ್ಬರದ ಬಳಕೆಯಿಂದ ಉತ್ತಮ ಫಸಲು
ಗದ್ದೆಯನ್ನು ಹದ ಮಾಡುವ ಮೊದಲು ಸಾವಯವ ಗೊಬ್ಬರಗಳಾದ ದನದ ಹಟ್ಟಿ ಗೊಬ್ಬರ ಹಾಗೂ ಸುಡು ಮಣ್ಣು, ಹಸಿರು ಎಲೆ ಗೊಬ್ಬರ ಮಾತ್ರ ಉಪಯೋಗ ಮಾಡಿದ್ದಾರೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ರಾಸಾಯನಿಕ ರಸಗೊಬ್ಬರಗಳನ್ನು ಬಳಸುತ್ತಿದ್ದರು ಆದರೆ ಅದನ್ನು ಸಂಪೂರ್ಣ ನಿಲ್ಲಿಸಿ ಸಾವಯವ ಗೊಬ್ಬರ ಬಳಸಿದಾಗ ಹೆಚ್ಚಿನಇಳುವರಿ ಸಿಗುತ್ತಿದೆ. ಗದ್ದೆಗಳಿಗೆ ಸಾಂಪ್ರದಾಯಿಕ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದ ನೈಸರ್ಗಿಕದತ್ತವಾದ ಕಹಿಬೇವು ಎಣ್ಣೆ ಹುಳು ಬಾಧೆಗಾಗಿ ಹಾಗೂ ಬೂದಿಯ ಸಿಂಪಡಿಕೆಯಿಂದ ರೋಗ ನಿವಾರಕ ಕೃಷಿ ಸಾಗುತ್ತಿದೆ.

ಇತ್ತಿಚಿನ ದಿನಗಳಲ್ಲಿ ಊರಿನಲ್ಲಿ ಭತ್ತದ ಬೇಸಾಯಕ್ಕೆ ಕಾರ್ಮಿಕರ ಕೊರತೆ ಕಂಡು ಬರುತ್ತಿದ್ದು ಹೊರ ರಾಜ್ಯಗಳ ಕಾರ್ಮಿಕರ ತಂಡಗಳು ಆಗಮಿಸಿ ಗುತ್ತಿಗೆ ಆಧಾರದಲ್ಲಿ ನೇಜಿ ತೆಗೆದು ಒಂದೇ ದಿನದಲ್ಲಿ ಸುಮಾರು ಐದು ಎಕರೆಯನ್ನು ನಾಟಿ ಮಾಡುವುದರಿಂದ ಹಣವೂ ಉಳಿತಾಯ ಸಮಯವೂ ಉಳಿತಾಯ
ಮೀಟರ್ ತಳಿಯಲ್ಲಿ ಕೇವಲ ಒಂದೆರಡು ಸಸಿಗಳನ್ನು ಒಟ್ಟಾಗಿ ನೆಟ್ಟಾಗ ಹುಲುಸಾಗಿ ಬೆಳೆಯುತ್ತವೆ. ತೆನೆ ಹಾಗೂ ತೆನೆಯಲ್ಲಿ ಕಾಳಿನ ಸಂಖ್ಯೆ ಹೆಚ್ಚಾಗಿ ಇಳುವರಿಯೂ ಹೆಚ್ಚುತ್ತದೆ. ಇದರ ಜೊತೆಗೆ ಬಿತ್ತನೆ ಬೀಜದಲ್ಲಿ ಮತ್ತು ನೀರಾವರಿ ಪ್ರಮಾಣದಲ್ಲಿ ಕಡಿತವಾಗಿ ಬೇಸಾಯದ ಖರ್ಚು ಕಡಿಮೆಯಾಗುತ್ತದೆ.

ತೊಂಬತ್ತು ಕಿಲೋ ಭತ್ತದಲ್ಲಿ ೫ ಎಕೆರೆ ನಾಟಿ ಮಾಡಲಾಗಿದ್ದು ಒಂದು ಎಕರೆಗೆ ಸರಸಾರಿ 15 ರಿಂದ 30 ಕ್ವಿಂಟಾಲ್ ಭತ್ತ ಇಳುವರಿ

Kinnigoli-14091701 Kinnigoli-14091702 Kinnigoli-14091703

 

Comments

comments

Comments are closed.

Read previous post:
Kinnigoli-12091708
Teachers day : Maryvale School

Kinnigoli: On the occasion of teacher’s day on 5th September, teachers were held in high esteem by the students of Maryvale...

Close