ಐಕಳ ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ

ಕಿನ್ನಿಗೋಳಿ: ಐಕಳ ಶಿಕ್ಷಕರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ರೋಕಿ. ಜಿ. ಲೋಬೊ ಅಧ್ಯಕ್ಷತೆಯಲ್ಲಿಪೋಂಪೈ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ 2016-17 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿಅತ್ಯಧಿಕ ಅಂಕ ಗಳಿಸಿದ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು.
ನಿವೃತ್ತಿ ಹೊಂದಿದ ಸಂಘದ ಸದಸ್ಯರಾದ ಗೋಪಾಲ್ ಎಸ್, ನಾಗಪ್ಪ ಆಚಾರ್ ಮತು ಅಪೋಲಿನ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಸಹ ಕಾರ್ಯದರ್ಶಿ ಮನಿಷಾ ಅಮೀನ್, ಆಡಳಿತ ಮಂಡಳಿ ಸದಸ್ಯರಾದ ಸಿಬಿಲ್ ಡಯಾನಾ ಮಿನೆಜಸ್, ಪುರುಷೋತ್ತಮ ಕೆ.ವಿ, ಹೆರಾಲ್ಡ್‌ಡಿಸೋಜ, ಜೇಮ್ಸ್ ಒಲಿವೆರ್, ಆಲ್ವಿನ್ ಮಿರಾಂದ, ರಾಮಚಂದ್ರ ಭಟ್, ಆಂಡ್ರ್ಯೂ ಮಿಸ್ಕಿತ್ ಹಾಗೂ ರೀಟಾ ಡಯಾಸ್ ಉಪಸ್ಥಿತರಿದ್ದರು.
ಸಂಘದಕಾರ್ಯದರ್ಶಿ ರೇಷ್ಮಾ ಸೆರಾವೋ ಸಂಘದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಆಡಳಿತ ಮಂಡಳಿ ಸದಸ್ಯ ಎಲ್. ಎನ್ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.

Kinnigoli-150917016

Comments

comments

Comments are closed.

Read previous post:
Kinnigoli-150917015
ಸೇಸಮ್ಮ ಪೂಜಾರಿ

ಕಿನ್ನಿಗೋಳಿ: ದಾಮಸ್ಕಟ್ಟೆ ಮಣಿಕಂಠ ನಿಲಯದ ಸೇಸಮ್ಮ ಪೂಜಾರಿ (87) ಅವರು ಸ್ವಗ್ರಹದಲ್ಲಿ ಭಾನುವಾರ ನಿಧನ ಹೊಂದಿದರು ಮೃತರಿಗೆ 5 ಹೆಣ್ಣು ಮತ್ತು ಮೂರು ಗಂಡು ಮಕ್ಕಳು ಇದ್ದಾರೆ.

Close