ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ

ಕಿನ್ನಿಗೋಳಿ : ಕನ್ನಡ ಶಾಲೆಯಲ್ಲಿ ಕಲಿತ ಸಾವಿರಾರು ಮಕ್ಕಳು ಉನ್ನತ ಸ್ಥಾನ ಮಾನದಲ್ಲಿ ಇದ್ದಾರೆ ಆದ್ದರಿಂದ ಕನ್ನಡ ಶಾಲೆಯ ಬಗ್ಗೆ ಕೀಳರಿಮೆ ಇರಿಸಿಕೊಳ್ಳಬಾರದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೆಲವೊಂದು ಸವಲತ್ತುಗಳಿಂದ ಹಿಂದೆ ಬೀಳಬಾರದು ಎಂದು ಮೂಲ್ಕಿ ವಿಜಯಾ ಕಾಲೇಜು ಆಡಳಿತ ಮಂಡಳಿಯ ಶಮೀನಾ ಜಿ. ಆಳ್ವ ಹೇಳಿದರು.
ಕೆಂಚನಕೆರೆ ದ. ಕ. ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ಶನಿವಾರ ಪ್ರೊಜೆಕ್ಟರ್ ಹಸ್ತಾಂತರ ನೀಡಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುನೀತಾ ಶೆಟ್ಟಿಗಾರ್, ಉಪಾಧ್ಯಕ್ಷೆ ಕಲಾವತಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಉಪಸ್ಥಿರಿದ್ದರು.
ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಸಹಶಿಕ್ಷಕಿ ಸುಮನಾ ಕಾರ್ಯಕ್ರಮ ನಿರೂಪಿಸಿದರು.

Kinnigoli-16071701

Comments

comments

Comments are closed.

Read previous post:
Padupanmboor-14091701
ಮನೆ ತೆರಿಗೆ ವಸೂಲಾತಿಯಲ್ಲಿ ರಿಯಾಯಿತಿ ಬೇಡ

ಪಡುಪಣಂಬೂರು : ಮನೆ ತೆರಿಗೆಯನ್ನು ಪ್ರತಿಯೊಬ್ಬರು ಪಾವತಿಸಬೇಕಾಗಿರುವುದರಿಂದ ವಿದೇಶದಲ್ಲಿದ್ದವರಿಗೆ ಹಾಗೂ ಹೊರ ರಾಜ್ಯದಲ್ಲಿದ್ದವರಿಗೆ ಯಾವುದೇ ರೀತಿಯಲ್ಲಿ ರಿಯಾಯಿತಿ ನೀಡಬಾರದು, ಯಾವುದೇ ದಂಡ ಶುಲ್ಕ ಇಲ್ಲದೆ ಇರುವುದರಿಂದ ಇದನ್ನು...

Close